Exam Mastermind - PSI Mock Test (Paper 2)
 
ಎಕ್ಸಾಮ್ ಮಾಸ್ಟರ್ ಮೈಂಡ್ 
 ಅಣಕು ಪರೀಕ್ಷೆ - ಪಿಎಸ್ಐ (ಪತ್ರಿಕೆ 2)

Kindly let us know your Name (To be included in your participation certificate)
 
ನಿಮ್ಮ ಹೆಸರನ್ನು ನಮಗೆ ತಿಳಿಸಿ (ನಿಮ್ಮ ಭಾಗವಹಿಸುವಿಕೆ ಪ್ರಮಾಣಪತ್ರದಲ್ಲಿ ಸೇರಿಸಲು)
Kindly let us know your phone number
 
ನಿಮ್ಮ ಫೋನ್ ಸಂಖ್ಯೆಯನ್ನು ದಯವಿಟ್ಟು ನಮಗೆ ತಿಳಿಸಿ
Kindly let us know your email ID (Your certificate and result will be shared on this mail ID).
 
ನಿಮ್ಮ ಇಮೇಲ್ ಐಡಿಯನ್ನು ದಯವಿಟ್ಟು ನಮಗೆ ತಿಳಿಸಿ (ನಿಮ್ಮ ಪ್ರಮಾಣಪತ್ರ ಮತ್ತು ಫಲಿತಾಂಶವನ್ನು ಈ ಮೇಲ್ ಐಡಿ ಗೆ ಕಳಿಸಿಕೊಡಲಾಗುವುದು).

Dear  kindly read below given instructions and confirm the same before starting the mock test.

  1. The question paper contains 100 questions. All questions carry equal marks. Each question carries 1.50 marks. 25% marks will be deducted I.e., 0.375 for every wrong answer.
  2. The 100 questions to be answered in 90 minutes
  3. Questions are both in English and Kannada
  4. Once you start the mocktest, you will have to finish the test within 2 hrs
  5. You can skip any question, go back to the previous question to change your answer, or decide not to attempt a question
 
ಈ ಅಣಕು ಪರೀಕ್ಷೆಯನ್ನು ಪ್ರಾರಂಭಿಸುವ ಮೊದಲು ಕೆಳಗೆ ನೀಡಲಾದ ಸೂಚನೆಗಳನ್ನು ದಯವಿಟ್ಟು ಓದಿ ಮತ್ತು ದೃಢೀಕರಿಸಿ.
 
1. ಈ ಅಣಕು ಪರೀಕ್ಷೆಯು ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿದೆ. ಪ್ರತಿ ಪ್ರಶ್ನೆಗಳು ತಲಾ 1.5 ಅಂಕಗಳೊಂದಿಗೆ ಒಟ್ಟು 150 ಅಂಕಗಳದ್ದಾಗಿರುತ್ತದೆ.
 ಪ್ರತಿ ತಪ್ಪು ಉತ್ತರಕ್ಕೆ ಶೇಕಡಾ 25 ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ ಅಂದರೆ 0.375 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
 
2. ಪರೀಕ್ಷೆಯ ಅವಧಿ ತೊಂಬತ್ತು ನಿಮಿಷಗಳಾಗಿರುತ್ತದೆ.
 
3. ಪ್ರಶ್ನೆಗಳು ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಇರುತ್ತವೆ.
 
4. ಒಮ್ಮೆ ನೀವು ಈ ಅಣಕು ಪರೀಕ್ಷೆಯನ್ನು ಪ್ರಾರಂಭಿಸಿದ ನಂತರ ನಿಗದಿತ ಅವಧಿಯೊಳಗೆ ಪರೀಕ್ಷೆಯನ್ನು ಮುಗಿಸಬೇಕಿರುತ್ತದೆ.
 
5. ಯಾವುದೇ ಪ್ರಶ್ನೆಯನ್ನು ನೀವು ಉತ್ತರಿಸಲು ಅಥವಾ ತ್ಯಜಿಸಲು  ಸ್ವತಂತ್ರರಿರುತ್ತೀರಿ.
I have read all the instruction
The difference between a number and its two-fifth is 510.What is 10% of that number?
 
ಒಂದು ಸಂಖ್ಯೆ ಮತ್ತು ಅದರ ಐದನೇ ಎರಡರಷ್ಟ(2/5 ರಷ್ಟು)ರ ನಡುವಿನ ವ್ಯತ್ಯಾಸವು 510 ಆಗಿರುತ್ತದೆ. ಹಾಗಿದ್ದಾಗ ಆ ಸಂಖ್ಯೆಯ ಶೇ10 ಎಷ್ಟಾಗಿರುತ್ತದೆ ?
12.75
85
204
None of these/ ಇವುಗಳಲ್ಲಿ ಯಾವುದೂ ಅಲ್ಲ
At present, the ratio between the ages of Nakula and Sahadeva is 4:3. After 6 years, Nakula’s age will be 26 years. What is the age of Sahadeva at present?

ಪ್ರಸಕ್ತ ನಕುಲ ಮತ್ತು ಸಹದೇವರ ವಯಸ್ಸಿನ ನಡುವಿನ ಅನುಪಾತವು 4:3 ಆಗಿದೆ. 6 ವರ್ಷಗಳ ನಂತರ ನಕುಲನ ವಯಸ್ಸು 26 ವರ್ಷಗಳಾಗಿರುತ್ತದೆ. ಹಾಗಿದ್ದರೆ ಸಹದೇವನ ಈಗಿನ  ವಯಸ್ಸು ಎಷ್ಟು?

12 years/ 12 ವರ್ಷಗಳು
15 years/ 15 ವರ್ಷಗಳು
19.5 years/ 19.5 ವರ್ಷಗಳು
21 years/ 21 ವರ್ಷಗಳು
A and B can do a work in 12 days, B and C can do it in 15 days, C and A can do it in 20 days. If A, B and C work together they will complete the work in:
 
ಎ ಮತ್ತು ಬಿ ಒಂದು ಕೆಲಸವನ್ನು 12 ದಿನಗಳಲ್ಲಿ ಮಾಡಿ ಮುಗಿಸಬಹುದು,

ಬಿ ಮತ್ತು ಸಿ ಜತೆಯಾಗಿ ಅದೇ ಕೆಲಸವನ್ನು 15 ದಿನಗಳಲ್ಲಿ ಮಾಡಿ ಮುಗಿಸಬಹುದು,

ಸಿ ಮತ್ತು ಎ ಆ ಕೆಲಸವನ್ನು 20 ದಿನಗಳಲ್ಲಿ ಮಾಡಬಹುದು.

ಹಾಗಿದ್ದಾಗ  ಎ, ಬಿ ಮತ್ತು ಸಿ ಒಟ್ಟಿಗೆ ಕೆಲಸ ಮಾಡಿದರೆ ಅವರು ಆ ಕೆಲಸವನ್ನು ಎಷ್ಟು ಸಮಯದಲ್ಲಿ ಪೂರ್ಣಗೊಳಿಸುತ್ತಾರೆ ?

5 days/ 5 ದಿನಗಳು
47/6 days/ 47/6 ದಿನಗಳು
10 days/ 10 ದಿನಗಳು
47/3 days/ 47/3 ದಿನಗಳು
Next number in the series 3, 12, 60, 360, 2520, x
 

ಈ ಕೆಳಗಿನ ಸರಣಿಯ  ಮುಂದಿನ ಸಂಖ್ಯೆ ಯಾವುದು ?

 3, 12, 60, 360, 2520, x

20,160
40,320
22,640
24,800

The framers of Indian Constitution have borrowed the idea of Directive principles of State Policy from the Constitution of

ಭಾರತೀಯ ಸಂವಿಧಾನದ ನಿರ್ಮಾಪಕರು ರಾಜ್ಯ ನೀತಿಯ ನಿರ್ದೇಶನ ತತ್ವಗಳ ಕಲ್ಪನೆಯನ್ನು ಈ ಕೆಳಗಿನ ಯಾವ ದೇಶದ ಸಂವಿಧಾನದಿಂದ  ಎರವಲು ಪಡೆದಿದ್ದಾರೆ 

United States of America / ಅಮೆರಿಕಾ ಸಂಯುಕ್ತ ಸಂಸ್ಥಾನಗಳು
Ireland / ಐರ್ ಲಾಂಡ್
United Kingdom / ಯುನೈಟೆಡ್ ಕಿಂಗ್ ಡಮ್
South Africa / ದಕ್ಷಿಣ ಆಫ್ರಿಕಾ

Read the following passage and answer the question:

Pollution is the introduction of harmful materials into the environment. These harmful materials are called pollutants. Pollutants can be natural, such as volcanic ash. They can also be created by human activity, such as trash or runoff produced by factories. Pollutants damage the quality of air, water, and land.

Many things that are useful to people produce pollution. Cars spew pollutants from their exhaust pipes. Burning coal to create electricity pollutes the air. Industries and homes generate garbage and sewage that can pollute the land and water. Pesticides—chemical poisons used to kill weeds and insects—seep into waterways and harm wildlife.

All living things—from one-celled microbes to blue whales—depend on Earth’s supply of air and water. When these resources are polluted, all forms of life are threatened.

Pollution is a global problem. Although urban areas are usually more polluted than the countryside, pollution can spread to remote places where no people live. For example, pesticides and other chemicals have been found in the Antarctic ice sheet. In the middle of the northern Pacific Ocean, a huge collection of microscopic plastic particles forms what is known as the Great Pacific Garbage Patch.

 

ಕೆಳಗಿನ ಭಾಗವನ್ನು ಓದಿ ಮತ್ತು  ಪ್ರಶ್ನೆ ಉತ್ತರಿಸಿ :

ಪರಿಸರಕ್ಕೆ ಹಾನಿಕಾರಕ ವಸ್ತುಗಳನ್ನು ಪರಿಚಯಿಸುವುದನ್ನು ಪರಿಸರ ಮಾಲಿನ್ಯ ಎನ್ನಬಹುದು.

ಈ ಹಾನಿಕಾರಕ ವಸ್ತುಗಳನ್ನು ಮಾಲಿನ್ಯಕಾರಕಗಳು ಎಂದು ಕರೆಯಲಾಗುತ್ತದೆ. ಮಾಲಿನ್ಯಕಾರಕಗಳು ಜ್ವಾಲಾಮುಖಿ ಬೂದಿಗಳಂತಹಾ ನೈಸರ್ಗಿಕ ವಸ್ತುಗಳಾಗಿರಬಹುದು ಅಥವಾ ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಅಥವಾ ಕೊಳಚೆ ಹರಿವಿನಂತಹ ಮಾನವ ಚಟುವಟಿಕೆಯಿಂದಲೂ ಉತ್ಪತ್ತಿಯಾಗಬಹುದು. ಮಾಲಿನ್ಯಕಾರಕಗಳು ಗಾಳಿ, ನೀರು ಮತ್ತು ಭೂಮಿಯ ಗುಣಮಟ್ಟವನ್ನು ಹಾಳುಮಾಡುತ್ತವೆ.

ಜನರಿಗೆ ಉಪಯುಕ್ತವಾದ ಅನೇಕ ವಸ್ತುಗಳು ಮಾಲಿನ್ಯವನ್ನು ಉಂಟುಮಾಡುತ್ತವೆ. ಮಹತ್ವದ ಸಾರಿಗೆ ಸಾಧನವಾದ ಕಾರುಗಳು ತಮ್ಮ ಹೊಗೆ ಪೈಪ್‌ಗಳಿಂದ ಮಾಲಿನ್ಯಕಾರಕಗಳನ್ನು ಹೊರಹಾಕುತ್ತವೆ. ವಿದ್ಯುತ್ ಉತ್ಪಾದನೆಯ ಸಲುವಾಗಿ ಕಲ್ಲಿದ್ದಲನ್ನು ಸುಡುವುದು ಗಾಳಿಯನ್ನು ಕಲುಷಿತಗೊಳಿಸುತ್ತದೆ. ಕೈಗಾರಿಕೆಗಳು ಮತ್ತು ಮನೆಗಳು ಭೂಮಿ ಮತ್ತು ನೀರನ್ನು ಕಲುಷಿತಗೊಳಿಸುವ ಕಸ ಮತ್ತು ಕೊಳಚೆಯನ್ನು ಉತ್ಪಾದಿಸುತ್ತದೆ.

ಕೀಟನಾಶಕಗಳು, ಕಳೆಗಳು ಹಾಗೂ ಕೀಟಗಳನ್ನು ಕೊಲ್ಲಲು ಬಳಸುವ ರಾಸಾಯನಿಕ ವಿಷಗಳಾಗಿದ್ದು,ಅವು ಜಲಮೂಲಗಳನ್ನು ತಲುಪಿ  ವನ್ಯಜೀವಿಗಳ ಆರೋಗ್ಯಕ್ಕೆ ಹಾನಿ ಮಾಡುತ್ತವೆ.

ಎಲ್ಲಾ ಜೀವಿಗಳು- ಏಕಕೋಶ ಸೂಕ್ಷ್ಮಜೀವಿಗಳಿಂದ ಹಿಡಿದು ದೈತ್ಯ ನೀಲಿ ತಿಮಿಂಗಿಲಗಳವರೆಗೂ ಜೀವಿಸಲು-ಭೂಮಿಯ ಗಾಳಿ ಮತ್ತು ನೀರಿನ ಪೂರೈಕೆಯನ್ನು ಅವಲಂಬಿಸಿರುತ್ತದೆ. ಈ ಸಂಪನ್ಮೂಲಗಳು ಕಲುಷಿತಗೊಂಡಾಗ, ಸಕಲ ಜೀವಜಾಲವು  ಅಪಾಯದಲ್ಲಿ ಸಿಲುಕುತ್ತದೆ.

ಮಾಲಿನ್ಯವು ಇಂದು ಜಾಗತಿಕ ಸಮಸ್ಯೆಯಾಗಿದ್ದು ನಗರ ಪ್ರದೇಶಗಳು ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಿಗಿಂತ ಹೆಚ್ಚು ಕಲುಷಿತವಾಗಿದ್ದರೂ, ಮಾಲಿನ್ಯವು ಜನವಸತಿಯಿಲ್ಲದ ದೂರದ ಸ್ಥಳಗಳಿಗೂ ಹರಡುತ್ತಿವೆ.

ಉದಾಹರಣೆಗೆ, ಅಂಟಾರ್ಕ್ಟಿಕ್ ಪ್ರದೇಶದ ವಿಶಾಲ ಮಂಜಿನ ಹಾಳೆಗಳಲ್ಲಿಯೂ ಈ ಕೀಟನಾಶಕಗಳು ಮತ್ತು ಇತರ ರಾಸಾಯನಿಕಗಳು ಕಂಡುಬಂದಿವೆ. ಉತ್ತರ ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿ, ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ ಬೃಹತ್ ಸಂಗ್ರಹವು ಪತ್ತೆಯಾಗಿದ್ದು ಇದನ್ನು ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್ ಎಂದು ಕರೆಯಲಾಗುತ್ತದೆ.

Pollution is

  1. Introduction of Pollutants into the atmosphere
  2. Caused by human activity only
  3. a global problem.

ಪರಿಸರ ಮಾಲಿನ್ಯವು

  1. ವಾತಾವರಣಕ್ಕೆ ಮಾಲಿನ್ಯಕಾರಕಗಳನ್ನು ಪರಿಚಯಿಸುವುದಾಗಿರುತ್ತದೆ.
  2. ಮಾನವ ಚಟುವಟಿಕೆಯಿಂದ ಮಾತ್ರ ಉಂಟಾಗುತ್ತದೆ.
  3. ಇದು ಜಾಗತಿಕ ಸಮಸ್ಯೆಯಾಗಿದೆ.
1 only/ 1 ಮಾತ್ರ
1 and 2 only/1 ಮತ್ತು 2 ಮಾತ್ರ
1, 2 and 3/ 1, 2 ಮತ್ತು 3.
1 and 3 only/ 1 ಮತ್ತು 3 ಮಾತ್ರ

Read the following passage and answer the question:

Pollution is the introduction of harmful materials into the environment. These harmful materials are called pollutants. Pollutants can be natural, such as volcanic ash. They can also be created by human activity, such as trash or runoff produced by factories. Pollutants damage the quality of air, water, and land.

Many things that are useful to people produce pollution. Cars spew pollutants from their exhaust pipes. Burning coal to create electricity pollutes the air. Industries and homes generate garbage and sewage that can pollute the land and water. Pesticides—chemical poisons used to kill weeds and insects—seep into waterways and harm wildlife.

All living things—from one-celled microbes to blue whales—depend on Earth’s supply of air and water. When these resources are polluted, all forms of life are threatened.

Pollution is a global problem. Although urban areas are usually more polluted than the countryside, pollution can spread to remote places where no people live. For example, pesticides and other chemicals have been found in the Antarctic ice sheet. In the middle of the northern Pacific Ocean, a huge collection of microscopic plastic particles forms what is known as the Great Pacific Garbage Patch.

 

ಕೆಳಗಿನ ಭಾಗವನ್ನು ಓದಿ ಮತ್ತು  ಪ್ರಶ್ನೆ ಉತ್ತರಿಸಿ :

ಪರಿಸರಕ್ಕೆ ಹಾನಿಕಾರಕ ವಸ್ತುಗಳನ್ನು ಪರಿಚಯಿಸುವುದನ್ನು ಪರಿಸರ ಮಾಲಿನ್ಯ ಎನ್ನಬಹುದು.

ಈ ಹಾನಿಕಾರಕ ವಸ್ತುಗಳನ್ನು ಮಾಲಿನ್ಯಕಾರಕಗಳು ಎಂದು ಕರೆಯಲಾಗುತ್ತದೆ. ಮಾಲಿನ್ಯಕಾರಕಗಳು ಜ್ವಾಲಾಮುಖಿ ಬೂದಿಗಳಂತಹಾ ನೈಸರ್ಗಿಕ ವಸ್ತುಗಳಾಗಿರಬಹುದು ಅಥವಾ ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಅಥವಾ ಕೊಳಚೆ ಹರಿವಿನಂತಹ ಮಾನವ ಚಟುವಟಿಕೆಯಿಂದಲೂ ಉತ್ಪತ್ತಿಯಾಗಬಹುದು. ಮಾಲಿನ್ಯಕಾರಕಗಳು ಗಾಳಿ, ನೀರು ಮತ್ತು ಭೂಮಿಯ ಗುಣಮಟ್ಟವನ್ನು ಹಾಳುಮಾಡುತ್ತವೆ.

ಜನರಿಗೆ ಉಪಯುಕ್ತವಾದ ಅನೇಕ ವಸ್ತುಗಳು ಮಾಲಿನ್ಯವನ್ನು ಉಂಟುಮಾಡುತ್ತವೆ. ಮಹತ್ವದ ಸಾರಿಗೆ ಸಾಧನವಾದ ಕಾರುಗಳು ತಮ್ಮ ಹೊಗೆ ಪೈಪ್‌ಗಳಿಂದ ಮಾಲಿನ್ಯಕಾರಕಗಳನ್ನು ಹೊರಹಾಕುತ್ತವೆ. ವಿದ್ಯುತ್ ಉತ್ಪಾದನೆಯ ಸಲುವಾಗಿ ಕಲ್ಲಿದ್ದಲನ್ನು ಸುಡುವುದು ಗಾಳಿಯನ್ನು ಕಲುಷಿತಗೊಳಿಸುತ್ತದೆ. ಕೈಗಾರಿಕೆಗಳು ಮತ್ತು ಮನೆಗಳು ಭೂಮಿ ಮತ್ತು ನೀರನ್ನು ಕಲುಷಿತಗೊಳಿಸುವ ಕಸ ಮತ್ತು ಕೊಳಚೆಯನ್ನು ಉತ್ಪಾದಿಸುತ್ತದೆ.

ಕೀಟನಾಶಕಗಳು, ಕಳೆಗಳು ಹಾಗೂ ಕೀಟಗಳನ್ನು ಕೊಲ್ಲಲು ಬಳಸುವ ರಾಸಾಯನಿಕ ವಿಷಗಳಾಗಿದ್ದು,ಅವು ಜಲಮೂಲಗಳನ್ನು ತಲುಪಿ  ವನ್ಯಜೀವಿಗಳ ಆರೋಗ್ಯಕ್ಕೆ ಹಾನಿ ಮಾಡುತ್ತವೆ.

ಎಲ್ಲಾ ಜೀವಿಗಳು- ಏಕಕೋಶ ಸೂಕ್ಷ್ಮಜೀವಿಗಳಿಂದ ಹಿಡಿದು ದೈತ್ಯ ನೀಲಿ ತಿಮಿಂಗಿಲಗಳವರೆಗೂ ಜೀವಿಸಲು-ಭೂಮಿಯ ಗಾಳಿ ಮತ್ತು ನೀರಿನ ಪೂರೈಕೆಯನ್ನು ಅವಲಂಬಿಸಿರುತ್ತದೆ. ಈ ಸಂಪನ್ಮೂಲಗಳು ಕಲುಷಿತಗೊಂಡಾಗ, ಸಕಲ ಜೀವಜಾಲವು  ಅಪಾಯದಲ್ಲಿ ಸಿಲುಕುತ್ತದೆ.

ಮಾಲಿನ್ಯವು ಇಂದು ಜಾಗತಿಕ ಸಮಸ್ಯೆಯಾಗಿದ್ದು ನಗರ ಪ್ರದೇಶಗಳು ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಿಗಿಂತ ಹೆಚ್ಚು ಕಲುಷಿತವಾಗಿದ್ದರೂ, ಮಾಲಿನ್ಯವು ಜನವಸತಿಯಿಲ್ಲದ ದೂರದ ಸ್ಥಳಗಳಿಗೂ ಹರಡುತ್ತಿವೆ.

ಉದಾಹರಣೆಗೆ, ಅಂಟಾರ್ಕ್ಟಿಕ್ ಪ್ರದೇಶದ ವಿಶಾಲ ಮಂಜಿನ ಹಾಳೆಗಳಲ್ಲಿಯೂ ಈ ಕೀಟನಾಶಕಗಳು ಮತ್ತು ಇತರ ರಾಸಾಯನಿಕಗಳು ಕಂಡುಬಂದಿವೆ. ಉತ್ತರ ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿ, ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ ಬೃಹತ್ ಸಂಗ್ರಹವು ಪತ್ತೆಯಾಗಿದ್ದು ಇದನ್ನು ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್ ಎಂದು ಕರೆಯಲಾಗುತ್ತದೆ.

Great pacific Garbage patch is

ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್ ಎಂದರೆ

A huge collection of microscopic plastic particles in the Northern Pacific Ocean/ ಉತ್ತರ ಪೆಸಿಫಿಕ್‌ ಮಹಾಸಾಗರದಲ್ಲಿ ಕಂಡುಬರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ ಬೃಹತ್ ಸಂಗ್ರಹವಾಗಿದೆ
A huge collection of microscopic plastic particles in the Southern Pacific Ocean/ ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಕಂಡುಬರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ ಬೃಹತ್ ಸಂಗ್ರಹವಾಗಿದೆ
A huge collection of microscopic plastic particles in the Western Pacific Ocean/ ಪಶ್ಚಿಮ ಪೆಸಿಫಿಕ್‌ ಸಾಗರದಲ್ಲಿ ಕಂಡುಬರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ ಬೃಹತ್ ಸಂಗ್ರಹವಾಗಿದೆ
A huge collection of microscopic plastic particles in the Eastern Pacific Ocean/ ಪೂರ್ವ ಪೆಸಿಫಿಕ್‌ ಮಹಾಸಾಗರದಲ್ಲಿ ಕಂಡುಬರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ ಬೃಹತ್ ಸಂಗ್ರಹವಾಗಿದೆ

Read the following passage and answer the question:

Pollution is the introduction of harmful materials into the environment. These harmful materials are called pollutants. Pollutants can be natural, such as volcanic ash. They can also be created by human activity, such as trash or runoff produced by factories. Pollutants damage the quality of air, water, and land.

Many things that are useful to people produce pollution. Cars spew pollutants from their exhaust pipes. Burning coal to create electricity pollutes the air. Industries and homes generate garbage and sewage that can pollute the land and water. Pesticides—chemical poisons used to kill weeds and insects—seep into waterways and harm wildlife.

All living things—from one-celled microbes to blue whales—depend on Earth’s supply of air and water. When these resources are polluted, all forms of life are threatened.

Pollution is a global problem. Although urban areas are usually more polluted than the countryside, pollution can spread to remote places where no people live. For example, pesticides and other chemicals have been found in the Antarctic ice sheet. In the middle of the northern Pacific Ocean, a huge collection of microscopic plastic particles forms what is known as the Great Pacific Garbage Patch.

 

Which of the following is/are considered as pollutants?

  1. Volcanic ash
  2. Pesticides
  3. Vehicle exhaust fumes

 

ಕೆಳಗಿನ ಭಾಗವನ್ನು ಓದಿ ಮತ್ತು  ಪ್ರಶ್ನೆ ಉತ್ತರಿಸಿ :

ಪರಿಸರಕ್ಕೆ ಹಾನಿಕಾರಕ ವಸ್ತುಗಳನ್ನು ಪರಿಚಯಿಸುವುದನ್ನು ಪರಿಸರ ಮಾಲಿನ್ಯ ಎನ್ನಬಹುದು.

ಈ ಹಾನಿಕಾರಕ ವಸ್ತುಗಳನ್ನು ಮಾಲಿನ್ಯಕಾರಕಗಳು ಎಂದು ಕರೆಯಲಾಗುತ್ತದೆ. ಮಾಲಿನ್ಯಕಾರಕಗಳು ಜ್ವಾಲಾಮುಖಿ ಬೂದಿಗಳಂತಹಾ ನೈಸರ್ಗಿಕ ವಸ್ತುಗಳಾಗಿರಬಹುದು ಅಥವಾ ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಅಥವಾ ಕೊಳಚೆ ಹರಿವಿನಂತಹ ಮಾನವ ಚಟುವಟಿಕೆಯಿಂದಲೂ ಉತ್ಪತ್ತಿಯಾಗಬಹುದು. ಮಾಲಿನ್ಯಕಾರಕಗಳು ಗಾಳಿ, ನೀರು ಮತ್ತು ಭೂಮಿಯ ಗುಣಮಟ್ಟವನ್ನು ಹಾಳುಮಾಡುತ್ತವೆ.

ಜನರಿಗೆ ಉಪಯುಕ್ತವಾದ ಅನೇಕ ವಸ್ತುಗಳು ಮಾಲಿನ್ಯವನ್ನು ಉಂಟುಮಾಡುತ್ತವೆ. ಮಹತ್ವದ ಸಾರಿಗೆ ಸಾಧನವಾದ ಕಾರುಗಳು ತಮ್ಮ ಹೊಗೆ ಪೈಪ್‌ಗಳಿಂದ ಮಾಲಿನ್ಯಕಾರಕಗಳನ್ನು ಹೊರಹಾಕುತ್ತವೆ. ವಿದ್ಯುತ್ ಉತ್ಪಾದನೆಯ ಸಲುವಾಗಿ ಕಲ್ಲಿದ್ದಲನ್ನು ಸುಡುವುದು ಗಾಳಿಯನ್ನು ಕಲುಷಿತಗೊಳಿಸುತ್ತದೆ. ಕೈಗಾರಿಕೆಗಳು ಮತ್ತು ಮನೆಗಳು ಭೂಮಿ ಮತ್ತು ನೀರನ್ನು ಕಲುಷಿತಗೊಳಿಸುವ ಕಸ ಮತ್ತು ಕೊಳಚೆಯನ್ನು ಉತ್ಪಾದಿಸುತ್ತದೆ.

ಕೀಟನಾಶಕಗಳು, ಕಳೆಗಳು ಹಾಗೂ ಕೀಟಗಳನ್ನು ಕೊಲ್ಲಲು ಬಳಸುವ ರಾಸಾಯನಿಕ ವಿಷಗಳಾಗಿದ್ದು,ಅವು ಜಲಮೂಲಗಳನ್ನು ತಲುಪಿ  ವನ್ಯಜೀವಿಗಳ ಆರೋಗ್ಯಕ್ಕೆ ಹಾನಿ ಮಾಡುತ್ತವೆ.

ಎಲ್ಲಾ ಜೀವಿಗಳು- ಏಕಕೋಶ ಸೂಕ್ಷ್ಮಜೀವಿಗಳಿಂದ ಹಿಡಿದು ದೈತ್ಯ ನೀಲಿ ತಿಮಿಂಗಿಲಗಳವರೆಗೂ ಜೀವಿಸಲು-ಭೂಮಿಯ ಗಾಳಿ ಮತ್ತು ನೀರಿನ ಪೂರೈಕೆಯನ್ನು ಅವಲಂಬಿಸಿರುತ್ತದೆ. ಈ ಸಂಪನ್ಮೂಲಗಳು ಕಲುಷಿತಗೊಂಡಾಗ, ಸಕಲ ಜೀವಜಾಲವು  ಅಪಾಯದಲ್ಲಿ ಸಿಲುಕುತ್ತದೆ.

ಮಾಲಿನ್ಯವು ಇಂದು ಜಾಗತಿಕ ಸಮಸ್ಯೆಯಾಗಿದ್ದು ನಗರ ಪ್ರದೇಶಗಳು ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಿಗಿಂತ ಹೆಚ್ಚು ಕಲುಷಿತವಾಗಿದ್ದರೂ, ಮಾಲಿನ್ಯವು ಜನವಸತಿಯಿಲ್ಲದ ದೂರದ ಸ್ಥಳಗಳಿಗೂ ಹರಡುತ್ತಿವೆ.

ಉದಾಹರಣೆಗೆ, ಅಂಟಾರ್ಕ್ಟಿಕ್ ಪ್ರದೇಶದ ವಿಶಾಲ ಮಂಜಿನ ಹಾಳೆಗಳಲ್ಲಿಯೂ ಈ ಕೀಟನಾಶಕಗಳು ಮತ್ತು ಇತರ ರಾಸಾಯನಿಕಗಳು ಕಂಡುಬಂದಿವೆ. ಉತ್ತರ ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿ, ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ ಬೃಹತ್ ಸಂಗ್ರಹವು ಪತ್ತೆಯಾಗಿದ್ದು ಇದನ್ನು ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್ ಎಂದು ಕರೆಯಲಾಗುತ್ತದೆ.

 

ಈ ಕೆಳಗಿನವುಗಳಲ್ಲಿ ಯಾವುದು/ವು ಅನ್ನು, ಮಾಲಿನ್ಯಕಾರಕಗಳೆಂದು ಪರಿಗಣಿಸಲಾಗಿದೆಯೇ?

  1. ಜ್ವಾಲಾಮುಖಿ ಬೂದಿ
  2. ಕೀಟನಾಶಕಗಳು
  3. ವಾಹನಗಳಿಂದ ಹೊರಸೂಸುವ ಹೊಗೆ
1 only/ 1 ಮಾತ್ರ
1 and 2 only/1 ಮತ್ತು 2 ಮಾತ್ರ
1, 2 and 3/ 1, 2 ಮತ್ತು 3
2 and 3 only/2 ಮತ್ತು 3 ಮಾತ್ರ
The number of tigers in Karnataka as per the 2018 All India Tiger Estimation Report is __________ .
 

2018 ರ 'ಅಖಿಲ ಭಾರತ ಹುಲಿ ಅಂದಾಜಿನ ವರದಿ'ಯ ಪ್ರಕಾರ ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ

526
524
512
442
The Government of Karnataka has launched a scheme in 2020 to provide doorstep government services to the citizens of Karnataka. The scheme is
 
ಕರ್ನಾಟಕ ಸರ್ಕಾರವು 2020 ರಲ್ಲಿ, ಕರ್ನಾಟಕದ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು ಈ ಕೆಳಗಿನ ಯಾವ ಯೋಜನೆಯನ್ನು ಪ್ರಾರಂಭಿಸಿದೆ ?
Jana Shakti/ ಜನತಾ ಶಕ್ತಿ
Jana Dhan/ ಜನ ಧನ್
Jana Sevak/ ಜನ ಸೇವಕ
Jana Kendra/ ಜನ ಕೇಂದ್ರ
The theme of “World Environment Day 2022” is
 
ಈ‌ ಕೆಳಗಿನ ಯಾವುದು 'ವಿಶ್ವ ಪರಿಸರ ದಿನ 2022' ರ ಥೀಮ್  ಆಗಿದೆ ?
Only One Universe/ ಒಂದೇ ಒಂದು ವಿಶ್ವ
Only one Earth/ ಒಂದೇ ಒಂದು ಭೂಮಿ
Only one World/ ಒಂದೇ ಒಂದು ಪ್ರಪಂಚ
Only One life/ ಒಂದೇ ಒಂದು ಜೀವನ

Consider the following statements

1) Carnatic Carp is the State fish of Karnataka

2) Southern Bird Wing is the State Butterfly of Karnataka.

Which of the above statement/s is/are true?
 

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

1) 'ಕರ್ನಾಟಿಕ್ ಕಾರ್ಪ್' ಕರ್ನಾಟಕದ ರಾಜ್ಯ ಮೀನಾಗಿದೆ.

2) 'ಸದರ್ನ್ ಬರ್ಡ್ ವಿಂಗ್' ಕರ್ನಾಟಕದ ರಾಜ್ಯ ಚಿಟ್ಟೆಯಾಗಿದೆ.

 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ ?

1 Only./ 1 ಮಾತ್ರ
2 Only./ 2 ಮಾತ್ರ.
Both 1 and 2./ 1 ಮತ್ತು 2 ಎರಡೂ.
Neither 1 nor 2./ ಯಾವುದೂ ಅಲ್ಲ.
 “Arcot Boycott” and “Thambu Chetty Chatta Katti” were the popular slogans used during
 
"ಆರ್ಕಾಟ್ ಬಾಯ್ಕಾಟ್ " ಮತ್ತು "ತಂಬು ಚೆಟ್ಟಿ ಚಟ್ಟ ಕಟ್ಟಿ" ಈ ಜನಪ್ರಿಯ ಘೋಷಣೆಗಳು ಈ ಕೆಳಗಿನ ಯಾವ ಹೋರಾಟದ ಸಂದರ್ಭದಲ್ಲಿ  ಬಳಕೆಯಾದವು ?
Shivapura Dhwaja Satyagraha. / ಶಿವಪುರ ಧ್ವಜ ಸತ್ಯಾಗ್ರಹ
Revolt of Halagali bedas. / ಹಲಗಲಿಯ ಬೇಡರ ದಂಗೆ.
Mysore Chalo Movement. / ಮೈಸೂರು ಚಲೋ ಚಳವಳಿ.
]Quit India Movement. / ಭಾರತ ಬಿಟ್ಟು ತೊಲಗಿ ಚಳುವಳಿ.

Consider the following statements regarding the Seva Sindhu Portal.

  1. Seva Sindhu is the common citizen service portal/facility of Government of Karnataka to provide government related services and other information in one place.
  2. Seva Sindhu is implemented under the e-District Mission Mode Project (MMP) of Department of Electronics and Information Technology (DeitY), Ministry of Communications & IT, Government of India.
Which of the above statement/s is/are true?
 

ಸೇವಾ ಸಿಂಧು ಪೋರ್ಟಲ್ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

  1. 'ಸೇವಾ ಸಿಂಧು' ಸಾಮಾನ್ಯ ನಾಗರಿಕರ ಸಲುವಾಗಿ ತಂದಿರುವ ಸೇವಾ ಪೋರ್ಟಲ್ ಆಗಿದ್ದು, ಇದು ಸರ್ಕಾರಿ ಸಂಬಂಧಿತ ಸೇವೆಗಳು ಮತ್ತು ಇತರ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಒದಗಿಸಲು ಕರ್ನಾಟಕ ಸರ್ಕಾರ ತಂದಿರುವ ಉಪಕ್ರಮವಾಗಿದೆ.
  2. ಸೇವಾ ಸಿಂಧು ಉಪಕ್ರಮವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ (DeitY) ಮತ್ತು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ - ಭಾರತ ಸರ್ಕಾರದ ಅಡಿಯಲ್ಲಿ ಬರುವ, ಇ-ಡಿಸ್ಟ್ರಿಕ್ಟ್ ಮಿಷನ್ ಮೋಡ್ ಪ್ರಾಜೆಕ್ಟ್ (MMP)ನ ಅಡಿಯಲ್ಲಿ ಅನುಷ್ಟಾನಕ್ಕೆ ತರಲಾಗಿದೆ.

ಮೇಲಿನ ಹೇಳಿಕೆ/ಗಳಲ್ಲಿ ಯಾವುದು/ವು ಸರಿಯಾಗಿದೆ ?

1 Only./ 1 ಮಾತ್ರ
2 Only / 2 ಮಾತ್ರ
Both 1 and 2./ 1 ಮತ್ತು 2 ಎರಡೂ.
Neither 1 nor 2./ ಯಾವುದೂ ಅಲ್ಲ
Who among the following is not a recipient of Karnataka Ratna Award?
 
ಈ ಕೆಳಗಿನವರಲ್ಲಿ ಯಾರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದಿಲ್ಲ?
Dr. Rajkumar/ ಡಾ.ರಾಜಕುಮಾರ್
Dr. J Javaregowda/ ಡಾ. ದೇ ಜವರೇಗೌಡ
Bhimsen Joshi/ ಭೀಮಸೇನ ಜೋಶಿ
Gangubai Hanagal/ ಗಂಗೂಬಾಯಿ ಹಾನಗಲ್

Consider the following statements regarding the Visvesvaraya Trade Promotion Centre (VTPC).

  1. It is under the aegis of Department of Industries and Commerce, Government of Karnataka
  2. It is the nodal agency for promotion of export from the State.

Which of the above statement/s is/are true?

ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ (VTPC) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

  1. ಇದು ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧೀನದಲ್ಲಿದೆ.
  2. ಇದು ರಾಜ್ಯದಿಂದ ರಫ್ತನ್ನು ಉತ್ತೇಜಿಸುವ ನೋಡಲ್ ಏಜೆನ್ಸಿಯಾಗಿದೆ.

ಮೇಲಿನ ಹೇಳಿಕೆ/ಗಳಲ್ಲಿ ಯಾವುದು/ಅವು ಸರಿಯಾಗಿದೆ ?

1 Only./ 1 ಮಾತ್ರ
2 Only / 2 ಮಾತ್ರ
Both 1 and 2./ 1 ಮತ್ತು 2 ಎರಡೂ.
Neither 1 nor 2./ ಯಾವುದೂ ಅಲ್ಲ

Which state ranks first in the India Innovation Index 2020?

ಭಾರತದ ನಾವೀನ್ಯತೆಯ ಸೂಚ್ಯಂಕ - 2020(ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ 2020 )ರಲ್ಲಿ ಈ ಕೆಳಗಿನ ಯಾವ ರಾಜ್ಯವು ಮೊದಲ ಸ್ಥಾನದಲ್ಲಿದೆ?

 

Maharashtra/ ಮಹಾರಾಷ್ಟ್ರ
Karnataka/ ಕರ್ನಾಟಕ
Tamil Nadu/ ತಮಿಳುನಾಡು
Andhra Pradesh. / ಆಂಧ್ರಪ್ರದೇಶ

Manikarnika Tambe was the original name of

'ಮಣಿಕರ್ಣಿಕಾ ತಾಂಬೆ' ಎನ್ನುವುದು ಈ ಕೆಳಗಿನ ಯಾರ ಮೂಲ ಹೆಸರಾಗಿತ್ತು ?

Jhansi Rani Lakshmi Bai/ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ
Raj Kumari Amrit Kaur/ ರಾಜ್ ಕುಮಾರಿ ಅಮೃತ್ ಕೌರ್
Rani Padmini/ ರಾಣಿ ಪದ್ಮಿನಿ
Rani Avanti Bai/ ರಾಣಿ ಅವಂತಿ ಬಾಯಿ
Which of the following is not a constitutional body?
 
ಈ ಕೆಳಗಿನವುಗಳಲ್ಲಿ ಯಾವುದು ಸಾಂವಿಧಾನಿಕ ಸಂಸ್ಥೆಯಲ್ಲ ?
Election Commission of India/ ಭಾರತದ ಚುನಾವಣಾ ಆಯೋಗ
National Human Rights Commission/ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
Karnataka Public Service Commission/ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ
Advocate General of the State/ ರಾಜ್ಯದ ಅಡ್ವೊಕೇಟ್ ಜನರಲ್.
Which of the following vedas deals with the Procedure for the performance of Sacrifices?
 
ಕೆಳಗಿನ ಯಾವ ವೇದಗಳು ಯಜ್ಞ ಯಾಗಾದಿಗಳ ಹವಿಸ್ಸು ಅರ್ಪಣೆಯ ಕಾರ್ಯ ವಿಧಾನಗಳ ಬಗ್ಗೆ ಉಲ್ಲೇಖಿಸುತ್ತವೆ ?
Rig Veda/ ಋಗ್ವೇದ
Sama Veda/ ಸಾಮವೇದ
Yajur Veda/ ಯಜುರ್ ವೇದ
Atharva Veda/ ಅಥರ್ವ ವೇದ
Prithviraj Raso was written by
 
'ಪೃಥ್ವಿರಾಜ್ ರಾಸೊ' ಕೃತಿಯನ್ನು ಬರೆದವರು
Kalhana/ ಕಲ್ಹಣ
Chand Bardai/ ಚಾಂದ್ ಬರ್ದಾಯಿ
Prithviraj Chauhan/ ಪೃಥ್ವಿರಾಜ್ ಚೌಹಾಣ್
Bilhana/ ಬಿಲ್ಹಣ
A megalithic burial cluster close to site of human habitation belonging to the Iron Age have been recently discovered near
 
ಕಬ್ಬಿಣ ಯುಗಕ್ಕೆ ಸೇರಿದ ಮಾನವ ವಾಸಸ್ಥಳಕ್ಕೆ ಹತ್ತಿರವಿರುವ ಮೆಗಾಲಿಥಿಕ್ ಸಮಾಧಿಸ್ಥಳವು ಇತ್ತೀಚೆಗೆ ಈ ಕೆಳಗಿನ ಯಾವ ಪ್ರದೇಶದಲ್ಲಿ ಪತ್ತೆಯಾಗಿದೆ ?
Kollegala in Chamarajanagara district/ ಚಾಮರಾಜನಗರ ಜಿಲ್ಲೆಯ ಕೊಲ್ಲೇಗಾಳ
Kandegala in Mandya district/ ಮಂಡ್ಯ ಜಿಲ್ಲೆಯ ಕಂದೇಗಾಲ
Mulabagilu in Kolara District/ ಕೋಲಾರಜಿಲ್ಲೆಯ ಮುಳಬಾಗಿಲು
Haliyala in Uttara Kannada district. / ಉತ್ತರಕನ್ನಡದ ಹಲಿಯಾಳ
Who among the following is known as Prachanna Buddha?
 
ಈ ಕೆಳಗಿನವರಲ್ಲಿ ಯಾರನ್ನು ಪ್ರಚ್ಛನ್ನ ಬುದ್ಧ ಎಂದು ಕರೆಯಲಾಗಿದೆ ?
Vallabhacharya/ ವಲ್ಲಭಾಚಾರ್ಯ
Ramanujacharya/ ರಾಮಾನುಜಾಚಾರ್ಯ
Shankaracharya/ ಶಂಕರಾಚಾರ್ಯ
Madhwacharya/ ಮಧ್ವಾಚಾರ್ಯ
Who among the following is known as Feuhrer?
 
ಕೆಳಗಿನವರಲ್ಲಿ ಯಾರನ್ನು ಫ್ಯೂರರ್ ಎಂದು ಕರೆಯಲಾಗುತ್ತದೆ?
Adolf Hitler/ ಅಡಾಲ್ಫ್ ಹಿಟ್ಲರ್
Benito Mussolini/ ಬೆನಿಟೊ ಮುಸೊಲಿನಿ
Napoleon Bonaparte/ ನೆಪೋಲಿಯನ್ ಬೋನಪಾರ್ಟೆ
King Charles/ ಕಿಂಗ್ ಚಾರ್ಲ್ಸ್
In winter, Wooden Chair appears hotter than metal Chair because
 
ಚಳಿಗಾಲದಲ್ಲಿ, ಮರದ ಕುರ್ಚಿಯು ಲೋಹದ ಕುರ್ಚಿಗಿಂತ ಬಿಸಿಯಾಗಿ ಕಾಣುತ್ತದೆ. ಯಾಕೆಂದರೆ
Metal is a good conductor of heat while wood is a bad conductor of heat. / ಲೋಹವು ಶಾಖದ ಉತ್ತಮ ವಾಹಕವಾಗಿದ್ದರೆ ಮರವು ಶಾಖದ ಕೆಟ್ಟ ವಾಹಕವಾಗಿದೆ.
Wood is a good conductor of heat while metal is a bad conductor of heat. / ಮರವು ಶಾಖದ ಉತ್ತಮ ವಾಹಕವಾಗಿದ್ದರೆ ಲೋಹವು ಶಾಖದ ಕೆಟ್ಟ ವಾಹಕವಾಗಿದೆ.
Wood absorbs more heat in comparison to metal. / ಲೋಹಕ್ಕೆ ಹೋಲಿಸಿದರೆ ಮರವು ಹೆಚ್ಚಿನ ಶಾಖವನ್ನು ಹೀರುತ್ತದೆ.
None of the above. / ಈ ಮೇಲಿನ ಯಾವುದೂ ಅಲ್ಲ.
“Tomb of Sand” was first originally published in Hindi in 2018 as
 
"ಟಾಂಬ್ ಆಫ್ ಸ್ಯಾಂಡ್" (ಮರಳ ಸಮಾಧಿ) ಕೃತಿಯನ್ನು 2018 ರಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಈ ಕೆಳಗಿನ ಯಾವ ಹೆಸರಿನಲ್ಲಿ ಪ್ರಕಟಿಸಲಾಯಿತು ?
Ret Samadhi/ ರೆಟ್ ಸಮಾಧಿ
Kitne Pakistan/ ಕಿಟ್ನೆ ಪಾಕಿಸ್ತಾನ
Gunaho Ka Devta/ ಗುಣಹೋ ಕಾ ದೇವತಾ
Madhushala/ ಮಧುಶಾಲಾ
Magod falls is formed by
 
ಮಾಗೋಡ್ ಜಲಪಾತವು ಈ ಕೆಳಗಿನ ಯಾವ ನದಿಯಿಂದ ರೂಪುಗೊಂಡಿದೆ ?
Mahadayi river/ ಮಹದಾಯಿ ನದಿ
Bedti river/ ಬೇಡ್ತಿ ನದಿ
Lakshmanateertha river/ ಲಕ್ಷ್ಮಣತೀರ್ಥ ನದಿ
Shimsha river/ ಶಿಂಷಾ ನದಿ
Which of the following districts has the longest coastline in Karnataka?
 
ಈ ಕೆಳಗಿನ ಯಾವ ಜಿಲ್ಲೆಯು ಕರ್ನಾಟಕದ ಅತಿ ಉದ್ದದ ಕರಾವಳಿತೀರವನ್ನು ಹೊಂದಿದೆ ?
Udupi/ ಉಡುಪಿ
Dakshina Kannada/ ದಕ್ಷಿಣಕನ್ನಡ
Uttara Kannada/ ಉತ್ತರಕನ್ನಡ
Kodagu/ ಕೊಡಗು
Which is the first country in Asia to legalize cannabis (Marijuana)?
 
ಗಾಂಜಾವನ್ನು (ಮಾರಿಯಾನಾ ಅಥವಾ ಮರಿಜುವಾನಾ) ಕಾನೂನುಬದ್ಧಗೊಳಿಸಿದ ಏಷ್ಯಾದ ಮೊದಲ ದೇಶ ಯಾವುದು?
Afghanistan/ ಅಫ್ಘಾನಿಸ್ತಾನ
Sri Lanka/ ಶ್ರೀಲಂಕಾ
Thailand/ ಥೈಲ್ಯಾಂಡ್
Vietnam/ ವಿಯೆಟ್ನಾಂ
Which product is approved for Shivamogga under the One District One Product scheme?
 
'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯ ಅಡಿಯಲ್ಲಿ ಶಿವಮೊಗ್ಗಕ್ಕೆ ಯಾವ ಉತ್ಪನ್ನವನ್ನು ಅನುಮೋದಿಸಲಾಗಿದೆ ?
Coconut products/ ತೆಂಗಿನ ಉತ್ಪನ್ನಗಳು
Mango/ ಮಾವು
Pineapple/ ಅನಾನಸ್
Bakery products/ ಬೇಕರಿ ಉತ್ಪನ್ನಗಳು.
If loss is 1/3 of S.P, the loss percentage is
 
ಒಂದು ವ್ಯವಹಾರದಲ್ಲಿ ನಷ್ಟವು ಮಾರುವ ಬೆಲೆಯ 1/3 ರಷ್ಟು ಆಗಿದ್ದರೆ, ನಷ್ಟದ ಶೇಕಡಾವಾರು ಎಷ್ಟಾಗಿರುತ್ತದೆ ?
50/3%
20%
25%
40/3%
PM SVANidhi is a scheme launched under the aegis of
 
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯು ಈ ಕೆಳಗಿನ ಯಾವ ಇಲಾಖೆಯ ಆಶ್ರಯದಲ್ಲಿ ಪ್ರಾರಂಭಿಸಲಾದ ಯೋಜನೆಯಾಗಿದೆ ?
Ministry of Housing & Urban Affairs/ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
Ministry of Commerce and Industry/ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
Ministry of Corporate affairs/ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
Ministry of Agriculture/ ಕೃಷಿ ಸಚಿವಾಲಯ
Which of the following is called as Green gold of odisha?
 
ಕೆಳಗಿನವುಗಳಲ್ಲಿ ಯಾವುದನ್ನು 'ಒಡಿಶಾದ ಹಸಿರು ಚಿನ್ನ' ಎಂದು ಕರೆಯಲಾಗುತ್ತದೆ?
Kendu leaves/ ಕೆಂಡು ಎಲೆಗಳು
Eucalyptus leaves/ ಯೂಕಲಿಪ್ಟಸ್ ಎಲೆಗಳು
Palm leaves/ ತಾಳೆ ಎಲೆಗಳು
Banana leaves/ ಬಾಳೆ ಎಲೆಗಳು
Which of the following banks is a Domestic Systemically Important Bank (D-SIB)?
 
ಈ ಕೆಳಗಿನ ಯಾವ ಬ್ಯಾಂಕ್‌ಗಳು ದೇಶೀಯವಾಗಿ ವ್ಯವಸ್ಥಿತವಾದ ಪ್ರಮುಖ ಬ್ಯಾಂಕ್(D-SIB) ಎಂದು ಪರಿಗಣಿಸಲ್ಪಟ್ಟಿದೆ ?
ICICI Bank/ ಐಸಿಐಸಿಐ ಬ್ಯಾಂಕ್
Axis Bank/ ಆಕ್ಸಿಸ್ ಬ್ಯಾಂಕ್
Kotak bank/ ಕೋಟಕ್ ಬ್ಯಾಂಕ್
Bank of Baroda/ ಬ್ಯಾಂಕ್ ಆಫ್ ಬರೋಡಾ
Kakatiya Ramappa temple was constructed during the reign of
 
ಕಾಕತೀಯ ರಾಮಪ್ಪ ದೇವಸ್ಥಾನವನ್ನು ಈ ಕೆಳಗಿನ ಯಾವ ರಾಜರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು ?
Recharla Rudra/ರೇಚರ್ಲ ರುದ್ರ
Mahadeva/ ಮಹಾದೇವ
Durjaya/ ದುರ್ಜಯ
Ganapati Deva/ಗಣಪತಿ ದೇವ
Which of the following is also known as ‘London Club’ ?
 
ಕೆಳಗಿನವುಗಳಲ್ಲಿ ಯಾವುದನ್ನು 'ಲಂಡನ್ ಕ್ಲಬ್' ಎಂದೂ ಕರೆಯುತ್ತಾರೆ?
Missile Technology Control Regime/ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ
Nuclear Suppliers Group/ ಪರಮಾಣು ಪೂರೈಕೆದಾರರ ಗುಂಪು
Australia group/ ಆಸ್ಟ್ರೇಲಿಯಾ ಗುಂಪು
G-20
Tomato flu, that was detected recently in some parts of Kerala is
 
ಕೇರಳದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಪತ್ತೆಯಾದ ಟೊಮೇಟೊ ಜ್ವರ
A disease of Tomato Crop/ ಟೊಮೆಟೊ ಬೆಳೆಗೆ ಬರುವ ಒಂದು ರೋಗವಾಗಿದೆ.
A viral infection among children below five years of age/ ಐದು ವರ್ಷದ ಕೆಳಗಿನ ಮಕ್ಕಳಿಗೆ ಕಂಡು ಬರುವ ಸಾಂಕ್ರಾಮಿಕ ಜ್ವರವಾಗಿದೆ.
A bacterial infection among the tomato growing farmers/ ಟೊಮೆಟೋ ಬೆಳೆಯುವ ಕೃಷಿಕರಲ್ಲಿ ಕಂಡುಬರುವ ಒಂದು ವಿಶೇಷ ರೋಗವಾಗಿದೆ.
An unusual fever seen in adults who consume raw tomatoes/ ಹಸಿ ಟೊಮೆಟೋವನ್ನು ಸೇವಿಸುವ ವಯಸ್ಕರಲ್ಲಿ ಕಂಡುಬರುವ ಒಂದು ಅಪರೂಪದ ಖಾಯಿಲೆಯಾಗಿದೆ.

What was the day of the week on 15th August, 1947?

ಆಗಸ್ಟ್ 15, 1947  ವಾರದ ಯಾವ ದಿನವಾಗಿತ್ತು ?

Tuesday/ ಮಂಗಳವಾರ
Thursday/ ಗುರುವಾರ
Friday/ ಶುಕ್ರವಾರ
Saturday/ ಶನಿವಾರ
A train 280m long, running with a speed of 63 kmph will pass a tree in
 
280ಮೀ ಉದ್ದದ ರೈಲೊಂದು ಗಂಟೆಗೆ 63 ಕಿಮೀ ವೇಗದಲ್ಲಿ ಚಲಿಸಿದರೆ ಒಂದು ಮರವನ್ನು ಹಾದು ಹೋಗಲು ತೆಗೆದುಕೊಳ್ಳುವ ಸಮಯವೆಷ್ಟು ?
14 sec/ 14 ಸೆಕೆಂಡುಗಳು
16 sec/ 16 ಸೆಕೆಂಡುಗಳು
18 sec/ 18 ಸೆಕೆಂಡುಗಳು
24 sec/ 24 ಸೆಕೆಂಡುಗಳು
If A:B = 5:7 and B:C = 6:11, then A:B:C is
 
ಎ:ಬಿ = 5 : 7 ಆಗಿದ್ದರೆ, ಬಿ : ಸಿ = 6: 11 ಆಗಿದ್ದರೆ, ಎ:ಬಿ:ಸಿ ಯ ಅನುಪಾತ ಎಷ್ಟಾಗಿರುತ್ತದೆ ?
55: 77: 66
30: 42: 77
35: 49: 42
None of the above/ ಮೇಲಿನ ಯಾವುದೂ ಅಲ್ಲ
The average age of a husband and his wife was 23 years at the time of their marriage. After five years they have a one-year child. The average age of the family now is 
 

ಒಂದು ದಂಪತಿಗಳ ವಿವಾಹದ ಸಮಯದಲ್ಲಿ ಗಂಡ ಮತ್ತು ಹೆಂಡತಿಯ  ಸರಾಸರಿ ವಯಸ್ಸು 23 ವರ್ಷಗಳಾಗಿರುತ್ತದೆ. 5 ವರುಷಗಳ ನಂತರ ಅವರ ಮಗುವಿನ ವಯಸ್ಸು ಒಂದು ವರುಷವಾಗಿರುತ್ತದೆ.

ಹಾಗಿದ್ದರೆ ಆ ಕುಟುಂಬದ ಸರಾಸರಿ ವಯಸ್ಸು ಎಷ್ಟು ?
19 years/ 19 ವರ್ಷಗಳು
23 years/ 23 ವರ್ಷಗಳು
28.5 years/ 28.5 ವರ್ಷಗಳು
29.3 years/ 29.3 ವರ್ಷಗಳು

The sum of three consecutive numbers is 87. The greatest among these three numbers is

ಮೂರು ಅನುಕ್ರಮ ಸಂಖ್ಯೆಗಳ ಮೊತ್ತವು 87 ಆಗಿದೆ. ಆ ಮೂರು ಸಂಖ್ಯೆಗಳಲ್ಲಿ ಅತ್ಯಂತ ದೊಡ್ಡ ಸಂಖ್ಯೆ ಯಾವುದಾಗಿರುತ್ತದೆ ?

26
28
29
30

Product of two co-prime numbers is 117. Their LCM should be

ಎರಡು ಸಹ-ಭಾಗಿಸಲಾಗದ(ಅವಿಭಾಜ್ಯ) ಸಂಖ್ಯೆಗಳ ಉತ್ಪನ್ನವು 117 ಆಗಿರುತ್ತದೆ.ಅವುಗಳ ಲಘುತ್ತಮ ಸಾಮಾನ್ಯ ಅಪವರ್ತನ ಎಷ್ಟಾಗಿರುತ್ತದೆ ?

1
117
Equal to their HCF/ ಅದರ ಮಹತ್ತಮ ಸಾಮಾನ್ಯ ಅಪವರ್ತನಕ್ಕೆ ಸಮಾನವಾಗಿರುತ್ತದೆ.
Cannot be determined/ ನಿರ್ಧರಿಸಲು ಸಾಧ್ಯವಿಲ್ಲ.
Which among the following is the country’s first state transport utility to have inducted BS VI buses?
 

ಈ ಕೆಳಗಿನವುಗಳಲ್ಲಿ ಯಾವುದು BS VI ಬಸ್‌ಗಳನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯ ಸಾರಿಗೆ ನಿಗಮವಾಗಿದೆ ?

Bengaluru Metropolitan Transport Corporation/ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
Delhi Transport Corporation/ ದೆಹಲಿ ಸಾರಿಗೆ ನಿಗಮ
Kerala State Road Transport Corporation/ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ
Andhra Pradesh State Road Transport Corporation/ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ
Which of the following is a Rabi crop?
 

ಕೆಳಗಿನವುಗಳಲ್ಲಿ ಯಾವುದು ರಾಬಿ ಬೆಳೆಯಾಗಿದೆ ?

Rice/ ಅಕ್ಕಿ
Mustard/ ಸಾಸಿವೆ
Maize/ ಮೆಕ್ಕೆಜೋಳ
Cotton/ ಹತ್ತಿ

The electoral college to elect the President of India does not include

ಭಾರತದ ರಾಷ್ಟ್ರಪತಿಗಳನ್ನು ​​ಆಯ್ಕೆ ಮಾಡುವ  ಚುನಾವಣಾ ಗಣದಲ್ಲಿ, ಈ ಕೆಳಗಿನ ಯಾರು ಒಳಗೊಳ್ಳುವುದಿಲ್ಲ ?

Elected members of both Houses of Parliament/ ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು
Elected members of the Legislative Assemblies of all States/ ಎಲ್ಲಾ ರಾಜ್ಯಗಳ ಶಾಸಕಾಂಗದ ಚುನಾಯಿತ ಸದಸ್ಯರು
Elected members of the Legislative Assemblies of National Capital Territory of Delhi and the Union Territory of Puducherry/ ರಾಷ್ಟ್ರೀಯ ರಾಜಧಾನಿ ಪ್ರದೇಶವಾದ ದೆಹಲಿ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಶಾಸಕಾಂಗದ ಚುನಾಯಿತ ಸದಸ್ಯರು
Members of the Legislative Councils of States/ ರಾಜ್ಯಗಳ ವಿಧಾನಪರಿಷತ್ತಿನ ಸದಸ್ಯರು
Which of the following language is included in the eighth schedule of the Indian Constitution?
 
ಈ ಕೆಳಗಿನ ಯಾವ ಭಾಷೆಯನ್ನು ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಸೇರಿಸಲಾಗಿದೆ?
Dogri / ಡೋಂಗ್ರಿ
Tulu / ತುಳು
English / ಇಂಗ್ಲಿಷ್
Kodava / ಕೊಡವ
Which of the following has been identified as a biodiversity heritage spots in Bengaluru by Karnataka State Government?
 
ಕರ್ನಾಟಕ ರಾಜ್ಯವು ಬೆಂಗಳೂರಿನಲ್ಲಿ ಈ ಕೆಳಗಿನ ಯಾವುದನ್ನು  'ಜೀವವೈವಿಧ್ಯ ಪರಂಪರೆಯ ತಾಣ' ಎಂದು ಗುರುತಿಸಿದೆ  ?
Roerich estate/ ರೋರಿಚ್ ಎಸ್ಟೇಟ್
Devika estate/ ದೇವಿಕಾ ಎಸ್ಟೇಟ್
Barbosa estate/ ಬಾರ್ಬೋಸಾ ಎಸ್ಟೇಟ್
Paes estate/ ಪೇಸ್ ಎಸ್ಟೇಟ್
“Shabdamanidarpana” a kannada grammar anthology is written by
 
"ಶಬ್ದಮಣಿದರ್ಪಣ" ಎಂಬ  ಕನ್ನಡ ವ್ಯಾಕರಣ ಗ್ರಂಥವನ್ನು ಬರೆದವರು
Keshiraja/ ಕೇಶಿರಾಜ
Mallikarjuna/ ಮಲ್ಲಿಕಾರ್ಜುನ
Dandi/ ದಂಡಿ
Nemichandra/ ನೇಮಿಚಂದ್ರ

Ladkhan temple is situated in

ಲಾಡಖಾನ್ ದೇವಾಲಯವು ಈ ಕೆಳಗಿನ ಯಾವ ಪ್ರದೇಶದಲ್ಲಿ  ನೆಲೆಗೊಂಡಿದೆ ?

Aihole/ ಐಹೊಳೆ
Pattadakallu/ ಪಟ್ಟದಕಲ್ಲು
Badami/ ಬಾದಾಮಿ
Ajanta/ ಅಜಂತಾ
Which Article provides for special officer for linguistic minorities appointed by President of India ?
 
ಈ ಕೆಳಗಿನ ಯಾವ ವಿಧಿಯು ಭಾರತದ ರಾಷ್ಟ್ರಪತಿಗಳಿಂದ ನೇಮಕಗೊಂಡ ಭಾಷಾ ಅಲ್ಪಸಂಖ್ಯಾತರ ವಿಶೇಷ ಅಧಿಕಾರಿಯನ್ನು ಒದಗಿಸುತ್ತದೆ?
Article 338/ ವಿಧಿ 338
Article 338 B/ ವಿಧಿ 338 ಬಿ
Article 350/ ವಿಧಿ 350
Article 350 B/ ವಿಧಿ 350 ಬಿ
Global Tobacco Epidemic 2021 report is released by
 
ಈ ಕೆಳಗಿನ ಯಾವ ಸಂಸ್ಥೆಯು ಜಾಗತಿಕ ತಂಬಾಕು ಸಾಂಕ್ರಾಮಿಕ 2021 ರ ವರದಿಯನ್ನು ಬಿಡುಗಡೆ ಮಾಡುತ್ತದೆ ?
WHO
WADA
FAO
UNESCO

Consider the following statements

  1. NALSA provides for free legal services to weaker sections
  2. National Handloom Day marks the launch of Non Cooperation Movement
Which of the above is correct ?
 

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

  1. NALSA (ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ) ದುರ್ಬಲ ವರ್ಗಗಳಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸುತ್ತದೆ.
  2. ರಾಷ್ಟ್ರೀಯ ಕೈಮಗ್ಗ ದಿನವು ಅಸಹಕಾರ ಚಳುವಳಿಯ ಪ್ರಾರಂಭವನ್ನು ಸೂಚಿಸುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?

1 only/ 1 ಮಾತ್ರ
2 only/ 2 ಮಾತ್ರ
Both 1 and 2/ 1 ಮತ್ತು 2 ಎರಡೂ
None of the above/ ಮೇಲಿನ ಯಾವುದೂ ಅಲ್ಲ
“Code Red for Humanity Report” is released by
 
"ಕೋಡ್ ರೆಡ್ ಫಾರ್ ಹ್ಯುಮಾನಿಟಿ ರಿಪೋರ್ಟ್" ಅನ್ನು ಬಿಡುಗಡೆ ಮಾಡುವವರು ಯಾರು?
IPCC
IUCN
World Bank
WHO
First country to vaccinate Children from age of 2 against Covid-19 is
 
ಕೋವಿಡ್-19 ವಿರುದ್ಧ 2 ವರ್ಷದ ಮಕ್ಕಳಿಗೆ ಲಸಿಕೆ ಹಾಕಿದ ಮೊದಲ ದೇಶ?
Rome/ ರೋಮ್
Italy/ ಇಟಲಿ
Cuba/ ಕ್ಯೂಬಾ
Brazil/ ಬ್ರೆಜಿಲ್
Sendai Framework is related to which of the following ?
 
ಸೆಂಡೈ ಫ್ರೇಮ್‌ವರ್ಕ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
Genetically Modified Organisms/ ತಳೀಯವಾಗಿ ಮಾರ್ಪಡಿಸಿದ ಜೀವಿಗಳು
Disaster Management/ ವಿಪತ್ತು ನಿರ್ವಹಣೆ
Coral Bleaching/ ಕೋರಲ್ ಬ್ಲೀಚಿಂಗ್
Land Desertification/ ಭೂ ಮರುಭೂಮಿಕರಣ

. Consider the following statements

  1. Inability of household to meet basic requirements like food, shelter is relative poverty
  2. Income/expenditure of households is below the national level average is absolute poverty
Which of the above is/are correct ?
 

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

  1. ಆಹಾರ, ವಸತಿ ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಅಸಮರ್ಥವಾಗಿದ್ದರೆ ಅದು ಸಾಪೇಕ್ಷ ಬಡತನವಾಗಿದೆ.
  2. ಕುಟುಂಬಗಳ ಆದಾಯ/ಖರ್ಚು ರಾಷ್ಟ್ರೀಯ ಮಟ್ಟದ ಸರಾಸರಿಗಿಂತ ಕೆಳಗಿರುವುದು ಸಂಪೂರ್ಣ ಬಡತನವಾಗಿದೆ.

ಮೇಲಿನವುಗಳಲ್ಲಿ ಯಾವುದು/ವು ಸರಿಯಾಗಿದೆ?

1 only/ 1 ಮಾತ್ರ
2 only/2 ಮಾತ್ರ
Both 1 and 2/ 1 ಮತ್ತು 2 ಎರಡೂ
None of the above/ ಮೇಲಿನ ಯಾವುದೂ ಅಲ್ಲ
Which among the following pairs is correct ?
 
ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?
PAHAL Scheme - LPG Cylinders/ ಪಹಲ್ ಯೋಜನೆ - LPG ಸಿಲಿಂಡರ್‌ಗಳು
Saubhagya Scheme - Electricity connections/ ಸೌಭಾಗ್ಯ ಯೋಜನೆ - ವಿದ್ಯುತ್ ಸಂಪರ್ಕಗಳು
KUSUM Scheme - Solar Pumpsets/ KUSUM ಯೋಜನೆ - ಸೌರ ಪಂಪ್‌ಸೆಟ್‌ಗಳು
All of the above/ ಮೇಲಿನ ಎಲ್ಲಾ
First India bank to come out with Green Bonds was
 

ಗ್ರೀನ್ ಬಾಂಡ್‌ಗಳನ್ನು ಹೊರತಂದ ಭಾರತದ ಮೊದಲ ಬ್ಯಾಂಕ್?

HDFC Bank/ HDFC ಬ್ಯಾಂಕ್
Yes Bank/ ಯೆಸ್ ಬ್ಯಾಂಕ್
Union bank/ ಯೂನಿಯನ್ ಬ್ಯಾಂಕ್
ICICI Bank/ ICICI ಬ್ಯಾಂಕ್
What was India’s rank in Global Hunger Index 2021 ?
 
ಗ್ಲೋಬಲ್ ಹಂಗರ್ ಇಂಡೆಕ್ಸ್ 2021 ರಲ್ಲಿ ಭಾರತದ ಶ್ರೇಣಿ ಯಾವುದು?
116
101
67
32
Which Article of Indian constitution provides for establishing Inter State council ?
 
ಭಾರತೀಯ ಸಂವಿಧಾನದ ಯಾವ ವಿಧಿಯು ಅಂತರ ರಾಜ್ಯ ಪರಿಷತ್ತನ್ನು ಸ್ಥಾಪಿಸಲು ಅವಕಾಶವನ್ನು ಒದಗಿಸುತ್ತದೆ?
Article 270/ ಲೇಖನ 270
Article 142/ ಲೇಖನ 142
Article 263/ ಲೇಖನ 263
Article 116/ ಲೇಖನ 116
India’s first social cryptocurrency is
 
ಭಾರತದ ಮೊದಲ ಸಾಮಾಜಿಕ ಕ್ರಿಪ್ಟೋಕರೆನ್ಸಿ
Chingari/ ಚಿಂಗಾರಿ
IndoCoin/ ಇಂಡೋಕಾಯಿನ್
SAGAR/ ಸಾಗರ್
$GARI/ $ಗರಿ
Which of the following pairs is correct ?
 
ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?
India’s first Private Train - Maharaja Express/ ಭಾರತದ ಮೊದಲ ಖಾಸಗಿ ರೈಲು - ಮಹಾರಾಜ ಎಕ್ಸ್‌ಪ್ರೆಸ್
Most Expensive Train in India - Tejas Express/ ಭಾರತದಲ್ಲಿನ ಅತ್ಯಂತ ದುಬಾರಿ ರೈಲು - ತೇಜಸ್ ಎಕ್ಸ್‌ಪ್ರೆಸ್
Oldest running Train in India - Punjab Mail/ ಭಾರತದಲ್ಲಿ ಓಡುತ್ತಿರುವ ಅತ್ಯಂತ ಹಳೆಯ ರೈಲು - ಪಂಜಾಬ್ ಮೇಲ್
None of the above/ ಮೇಲಿನ ಯಾವುದೂ ಅಲ್ಲ
At SCO Summit in 2021, which country was granted Full Membership ?
 
2021 ರ SCO ಶೃಂಗಸಭೆಯಲ್ಲಿ, ಯಾವ ದೇಶಕ್ಕೆ ಪೂರ್ಣ ಸದಸ್ಯತ್ವವನ್ನು ನೀಡಲಾಯಿತು?
Turkey/ ಟರ್ಕಿ
Saudi Arabia/ ಸೌದಿ ಅರೇಬಿಯಾ
Iran/ ಇರಾನ್
Armenia/ ಅರ್ಮೇನಿಯಾ
Central Vigilance Commission (CVC) was established on the recommendation of
 
ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ (CVC) ಅನ್ನು ಕೆಳಗಿನ ಯಾರ ಶಿಫಾರಸಿನ ಮೇರೆಗೆ ಸ್ಥಾಪಿಸಲಾಯಿತು?
Tendulkar Commission/ ತೆಂಡೂಲ್ಕರ್ ಆಯೋಗ
Santhanam Commission/ ಸಂತಾನಂ ಆಯೋಗ
Mandal Commission/ ಮಂಡಲ್ ಆಯೋಗ
Sarkaria Commission/ ಸರ್ಕಾರಿಯಾ ಆಯೋಗ
CORPAT Exercise is held between India and
 
CORPAT ನೌಕಾ ಕಸರತ್ತನ್ನು ಭಾರತ ಮತ್ತು ಈ ಕೆಳಗಿನ ಯಾವ ದೇಶದ ನಡುವೆ ನಡೆಸಲಾಗುತ್ತದೆ?
Thailand/ ಥೈಲ್ಯಾಂಡ್
Nepal/ ನೇಪಾಳ
Sri Lanka/ ಶ್ರೀಲಂಕಾ
France/ ಫ್ರಾನ್ಸ್
First survey ship of India which was launched recently is known as
 
ಇತ್ತೀಚೆಗೆ ಉಡಾವಣೆಯಾದ ಭಾರತದ ಮೊದಲ ಸರ್ವೇಕ್ಷಣಾ ಹಡಗು ಯಾವುದು?
Surat/ ಸೂರತ್
Sagarstambh/ ಸಾಗರಸ್ತಂಭ
Sandhyank/ ಸಂಧ್ಯಾಂಕ್
Visakhapatnam/ ವಿಶಾಖಪಟ್ಟಣ
First India to win Miss Trans Women 2021 Title was
 
ಮಿಸ್ ಟ್ರಾನ್ಸ್ ವುಮೆನ್ 2021 ಪ್ರಶಸ್ತಿಯನ್ನು ಗೆದ್ದವರು?
Shruthy Sitara/ ಶ್ರುತಿ ಸಿತಾರ
Deepanjali Ragav/ ದೀಪಾಂಜಲಿ ರಾಗವ್
Satyashri Sharmila/ ಸತ್ಯಶ್ರೀ ಶರ್ಮಿಳಾ
None of the above/ ಮೇಲಿನ ಯಾವುದೂ ಅಲ್ಲ
11th Edition of Ekuverin Military Exercise was held between India and
 
ಎಕುವೆರಿನ್ ಮಿಲಿಟರಿ ವ್ಯಾಯಾಮದ 11 ನೇ ಆವೃತ್ತಿಯು ಭಾರತ ಮತ್ತು ಯಾರ ನಡುವೆ ನಡೆಯಿತು?
USA/ ಅಮೆರಿಕ
Maldives/ ಮಾಲ್ಡೀವ್ಸ್
Japan/ ಜಪಾನ್
Australia/ ಆಸ್ಟ್ರೇಲಿಯಾ
Which Indian origin was SpaceX first flight Surgeon ?
 
ಈ ಕೆಳಗಿನ ಯಾರು ಭಾರತೀಯ ಮೂಲದ SpaceX ನ ಮೊದಲ ಫ್ಲೈಟ್ ಸರ್ಜನ್ ಆಗಿದ್ದಾರೆ?
Neena Malik/ ನೀನಾ ಮಲಿಕ್
Bala Krishna Madhur/ ಬಾಲ ಕೃಷ್ಣ ಮಧೂರು
Anil menon/ ಅನಿಲ್ ಮೆನನ್
None of the above/ ಮೇಲಿನ ಯಾವುದೂ ಅಲ್ಲ
Verenigde Oost Indishe Compagnie is another name for
 
ವೆರೆನಿಗ್ಡೆ ಊಸ್ಟ್ ಇಂಡಿಶ್ ಕಂಪನಿ (Verenigde Oost Indishe Compagnie) ಈ ಕೆಳಗಿನ ಯಾವುದರ ಇನ್ನೊಂದು ಹೆಸರಾಗಿದೆ ?
English East India Company/ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ
Dutch East India Company/ ಡಚ್ ಈಸ್ಟ್ ಇಂಡಿಯಾ ಕಂಪನಿ
Dutch East India Company/ ಡಚ್ ಈಸ್ಟ್ ಇಂಡಿಯಾ ಕಂಪನಿ
Portuguese in India/ ಭಾರತದಲ್ಲಿ ಪೋರ್ಚುಗೀಸರು
Person of the year 2021 according to Time Magazine is
 
ಟೈಮ್ ಮ್ಯಾಗಜೀನ್ ಪ್ರಕಾರ 2021 ರ ವರ್ಷದ ವ್ಯಕ್ತಿ
Elon Musk/ ಎಲೋನ್ ಮಸ್ಕ್
Joe Biden/ ಜೋ ಬಿಡನ್
Vladmir Putin/ ವ್ಲಾಡಿಮಿರ್ ಪುಟಿನ್
Narendra Modi/ ನರೇಂದ್ರ ಮೋದಿ
NFT seen in news recently is
 
ಇತ್ತೀಚೆಗೆ ಸುದ್ದಿಯಲ್ಲಿರುವ NFT ಯ ವಿಸ್ತೃತ ರೂಪ
New Fund Token/ ನ್ಯೂ ಫಂಡ್ ಟೋಕನ್
Neo Fungible Term/ ನಿಯೋ ಫಂಗಿಬಲ್ ಟರ್ಮ್
Non-Fungible Token/ ನಾನ್ ಫಂಗಿಬಲ್ ಟೋಕನ್
Neo Fund Term/ ನಿಯೋ ಫಂಡ್ ಟರ್ಮ್
Which of the following statements regarding Jagannath Temple in Puri is incorrect
 
ಪುರಿಯ ಜಗನ್ನಾಥ ದೇವಾಲಯದ ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
Constructed by King anantavarman/ ಇದನ್ನು ರಾಜ ಅನಂತವರ್ಮನ್ ನಿರ್ಮಿಸಿದನು.
It is also known as Yamanika Tirtha/ ಇದನ್ನು ಯಮಾನಿಕ ತೀರ್ಥ ಎಂದೂ ಕರೆಯುತ್ತಾರೆ.
Popularly known as White Pagoda/ ವೈಟ್ ಪಗೋಡಾ ಎಂದು ಇದನ್ನು ಜನಪ್ರಿಯವಾಗಿ ಕರೆಯುತ್ತಾರೆ.
None of the above/ ಮೇಲಿನ ಯಾವುದೂ ಅಲ್ಲ
Ganjam district declared itself to be “Child Marriage Free district” , it is in which state ?
 
ಗಂಜಾಂ ಜಿಲ್ಲೆಯು "ಬಾಲ್ಯವಿವಾಹ ಮುಕ್ತ ಜಿಲ್ಲೆ" ಎಂದು ಘೋಷಿಸಿಕೊಂಡಿದ್ದು, ಅದು ಯಾವ ರಾಜ್ಯದಲ್ಲಿದೆ?
West Bengal/ ಪಶ್ಚಿಮ ಬಂಗಾಳ
Bihar/ ಬಿಹಾರ
Uttar Pradesh/ ಉತ್ತರ ಪ್ರದೇಶ
Odisha/ ಒಡಿಶಾ
Best State Tableau in Republic Day parade 2022 was given to
 
2022 ರ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಯಾವ ರಾಜ್ಯಕ್ಕೆ ಅತ್ಯುತ್ತಮ ಟ್ಯಾಬ್ಲೊ ಪ್ರಶಸ್ತಿಯನ್ನು ನೀಡಲಾಗಿದೆ?
Uttar Pradesh/ ಉತ್ತರ ಪ್ರದೇಶ
Madhya Pradesh/ ಮಧ್ಯಪ್ರದೇಶ
Arunachal Pradesh/ ಅರುಣಾಚಲ ಪ್ರದೇಶ
Rajasthan/ ರಾಜಸ್ಥಾನ

Hypokalaemia is caused by deficiency of

ಹೈಪೋಕಾಲೆಮಿಯಾ ಈ ಕೆಳಗಿನ ಯಾವುದರ ಕೊರತೆಯಿಂದ ಉಂಟಾಗುತ್ತದೆ?

Potassium/ ಪೊಟ್ಯಾಸಿಯಮ್
Sodium/ ಸೋಡಿಯಂ
Phosphorus/ ರಂಜಕ
Sulphur/ ಸಲ್ಫರ್
Which among the following countries does not border “Caspian Sea” ?
 
ಈ ಕೆಳಗಿನ ಯಾವ ದೇಶಗಳು "ಕ್ಯಾಸ್ಪಿಯನ್ ಸಮುದ್ರ"ದ ಜೊತೆ ಗಡಿಯನ್ನು ಹೊಂದಿಲ್ಲ?
Azerbaijan/ ಅಜೆರ್ಬೈಜಾನ್
Kazakhstan/ ಕಝಾಕಿಸ್ತಾನ್
Turkmenistan/ ತುರ್ಕಮೆನಿಸ್ತಾನ್
Uzbekistan/ ಉಜ್ಬೇಕಿಸ್ತಾನ್
Indian state which topped in terms of Per Capita Net State Domestic Product 2022 was ?
 
ರಾಜ್ಯದ ತಲಾ ನಿವ್ವಳ ದೇಶೀಯ ಉತ್ಪನ್ನ 2022 ರಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ರಾಜ್ಯ ಯಾವುದು ?
Andhra Pradesh/ ಆಂಧ್ರಪ್ರದೇಶ
Telangana/ ತೆಲಂಗಾಣ
Karnataka/ ಕರ್ನಾಟಕ
Kerala/ ಕೇರಳ
First Indian to receive Boltzmann Medal is
 
ಬೋಲ್ಟ್ಜ್‌ಮನ್ ಪದಕ ಪಡೆದ ಮೊದಲ ಭಾರತೀಯ ಯಾರು?
Deepak Dhar/ ದೀಪಕ್ ಧರ್
T Raja Kumar/ ಟಿ .ರಾಜ ಕುಮಾರ್
Aarushi Verma/ ಆರುಷಿ ವರ್ಮಾ
None of the above/ ಮೇಲಿನ ಯಾವುದೂ ಅಲ್ಲ

Operation to rescue Indian citizens from war prolonged Ukraine was

ಸುದೀರ್ಘ ಉಕ್ರೇನ್ ಯುದ್ಧದಿಂದ ಭಾರತೀಯ ನಾಗರಿಕರನ್ನು ರಕ್ಷಿಸಿದ ಕಾರ್ಯಾಚರಣೆಯ ಹೆಸರೇನು ?

Operation Shakti/ ಆಪರೇಷನ್ ಶಕ್ತಿ
Operation Ganga/ ಆಪರೇಷನ್ ಗಂಗಾ
Operation Sagar/ ಆಪರೇಷನ್ ಸಾಗರ್
Operation Bharat/ ಆಪರೇಷನ್ ಭಾರತ್
57th Jnanpith Award was presented to
 
57 ನೇ ಜ್ಞಾನಪೀಠ ಪ್ರಶಸ್ತಿಯನ್ನು ಈ ಕೆಳಗಿನ ಯಾರಿಗೆ ನೀಡಲಾಗಿದೆ?
Nilamani Phoolan/ ನೀಲಮಣಿ ಫೂಲನ್
Damodar Mauzo/ ದಾಮೋದರ್ ಮೌಜೊ
Amitav Ghosh/ ಅಮಿತವ್ ಘೋಷ್
Krishna Sobti/ ಕೃಷ್ಣ ಸೊಬ್ತಿ
Women’s division of Indian national Army is named after
 

ಭಾರತೀಯ ರಾಷ್ಟ್ರೀಯ ಸೇನೆಯ ಮಹಿಳಾ ವಿಭಾಗವನ್ನು ಈ ಕೆಳಗಿನ ಯಾರ ಹೆಸರಿನಲ್ಲಿ ಹೆಸರಿಸಲಾಗಿದೆ?

Kittur Rani Channamma/ ಕಿತ್ತೂರು ರಾಣಿ ಚನ್ನಮ್ಮ
Razia Sultana/ ರಜಿಯಾ ಸುಲ್ತಾನ
Jhansi Rani Laxmi Bai/ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ
None of the above/ ಮೇಲಿನ ಯಾವುದೂ ಅಲ್ಲ
Indian army launched first Green Solar Energy Plant in
 
ಭಾರತೀಯ ಸೇನೆಯು ತನ್ನ ಮೊದಲ ಹಸಿರು ಸೌರಶಕ್ತಿ ಸ್ಥಾವರವನ್ನು ಎಲ್ಲಿ ಪ್ರಾರಂಭಿಸಿತು?
 
 
Ladakh/ ಲಡಾಖ್
Sikkim/ ಸಿಕ್ಕಿಂ
Assam/ ಅಸ್ಸಾಂ
Meghalaya/ ಮೇಘಾಲಯ

Which of these rights can be considered as equality rights?

  1. equality before law and equal protection of Laws.
  2. equality of opportunity in the matters of public employment.
  3. abolition of untouchability.

choose the correct code

ಕೆಳಗಿನ ಯಾವ ಹಕ್ಕುಗಳನ್ನು ಸಮಾನತೆಯ ಹಕ್ಕುಗಳೆಂದು ಪರಿಗಣಿಸಬಹುದು?

  1. ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿನ ಸಮಾನ ಸಂರಕ್ಷಣೆ.
  2. ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶ.
  3. ಅಸ್ಪೃಶ್ಯತಾ ನಿಷೇಧ.

ಕೋಡ್ ಬಳಸಿ ಸರಿಯಾದ ಉತ್ತರಗಳನ್ನು ಗುರುತಿಸಿ

1, 2 and 3/1, 2 ಮತ್ತು 3
1 and 3 /1 ಮತ್ತು 3
1 only/1 ಮಾತ್ರ
1 and 2./ 1 ಮತ್ತು 2.

Choose the correct statements with respect to cultural and educational rights given under Indian Constitution?

  1. cultural and educational rights are explained in two articles.
  2. linguistic and religious minorities can conserve their language, script and culture.

choose the correct code

ಭಾರತದ ಸಂವಿಧಾನದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

  1. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳಲ್ಲಿ ಎರಡು ವಿಧಿಗಳನ್ನು ಉಲ್ಲೇಖಿಸಲಾಗಿದೆ.
  2. ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಭಾಷೆ, ಲಿಪಿ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಹಕ್ಕನ್ನು ಹೊಂದಿರುತ್ತಾರೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1 only/1 ಮಾತ್ರ
2 only/2 ಮಾತ್ರ
1 and 2/1 ಮತ್ತು 2
Above mentioned statements are false. / ಮೇಲಿನ ಎರಡು ಹೇಳಿಕೆಗಳು ತಪ್ಪಾಗಿದೆ.

Which of these fundamental rights are given to foreign citizens under Indian Constitution?

  1. protection against arrest and detention.
  2. prohibition of employment of children in factories and hazardous industries.
  3. prohibition of discrimination on the grounds of religion, caste, race, sex and place of birth.

choose the correct code

ಕೆಳಗಿನ ಯಾವ ಮೂಲಭೂತ ಹಕ್ಕುಗಳನ್ನು ಭಾರತದ ಸಂವಿಧಾನ ವಿದೇಶಿ ಪ್ರಜೆಗಳಿಗೆ ಕೂಡ ಕಲ್ಪಿಸಿದೆ?

  1. ಬಂಧನ ಮತ್ತು ಸೆರೆವಾಸದ ವಿರುದ್ಧ ಸಂರಕ್ಷಣೆ.
  2. ಕಾರ್ಖಾನೆಗಳಲ್ಲಿ ಮತ್ತು ಅಪಾಯಕಾರಿ ಕೈಗಾರಿಕೆಗಳಲ್ಲಿ ಮಕ್ಕಳ ನಿಯೋಜನೆ ನಿಷೇಧ.
  3. ಧರ್ಮ, ಜಾತಿ, ಜನಾಂಗ, ಲಿಂಗ ಮತ್ತು ಜನ್ಮ ಸ್ಥಳಗಳ ಆಧಾರದ ಮೇಲೆ ತಾರತಮ್ಯತೆ ನಿಷೇಧ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1 only/1 ಮಾತ್ರ
1 and 2/1 ಮತ್ತು 2
3 only/3 ಮಾತ್ರ
2 and 3./ 2 ಮತ್ತು 3

During imposition of emergency, with respect to extension of Lok Sabha and legislative assembly which of the statements are true?

  1. the duration of Lok Sabha can be extended up to 1 year only once during national emergency.
  2. the duration of Lok Sabha can be extended up to 1 year for any number of times during national emergency.
  3. the duration of Legislative Assembly can be extended up to 1 year for two times.

choose the correct code

ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರುವ ಸಂದರ್ಭದಲ್ಲಿ ಲೋಕಸಭಾ ಮತ್ತು ವಿಧಾನಸಭೆಯ ಅವಧಿಯ ವಿಸ್ತರಣೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

  1. ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಗೆ ಬಂದ ಸಂದರ್ಭದಲ್ಲಿ ಲೋಕಸಭೆಯ ಅವಧಿಯನ್ನು ಒಂದು ವರ್ಷದಂತೆ ಒಂದು ಬಾರಿ ಮಾತ್ರ ವಿಸ್ತರಿಸಬಹುದು.
  2. ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಗೆ ಬಂದ ಸಂದರ್ಭದಲ್ಲಿ ಲೋಕಸಭೆಯ ಅವಧಿಯನ್ನು ಒಂದು ವರ್ಷದಂತೆ ಎಷ್ಟು ಬಾರಿಯಾದರೂ ವಿಸ್ತರಿಸಬಹುದು.
  3. ವಿಧಾನಸಭೆಯ ಅವಧಿಯನ್ನು ಒಂದು ವರ್ಷದಂತೆ ಎರಡು ಬಾರಿ ವಿಸ್ತರಿಸಬಹುದು.

ಕೋಡ್ ಬಳಸಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ

1 only/1 ಮಾತ್ರ
1 and 2/1 ಮತ್ತು 2
1,2 and 3/1, 2 ಮತ್ತು 3
2 only./ 2 ಮಾತ್ರ.
The position of Indian vice president resembles with which of these positions?
 
ಭಾರತದ ಉಪರಾಷ್ಟ್ರಪತಿಗಳ ಹುದ್ದೆ ಯಾವ ರಾಷ್ಟ್ರದ ಉಪರಾಷ್ಟ್ರಪತಿಗಳ ಹುದ್ದೆಯನ್ನು ಹೋಲುತ್ತದೆ?
American vice president./ ಅಮೆರಿಕದ ಉಪರಾಷ್ಟ್ರಪತಿಗಳ ಹುದ್ದೆ.
France vice president./ ಫ್ರಾನ್ಸ್ ರಾಷ್ಟ್ರದ ಉಪರಾಷ್ಟ್ರಪತಿಗಳ ಹುದ್ದೆ.
Switzerland vice president./ ಸ್ವಿಟ್ಜರ್ಲ್ಯಾಂಡ್ ರಾಷ್ಟ್ರದ ಉಪರಾಷ್ಟ್ರಪತಿಗಳ ಹುದ್ದೆ.
Canada vice president./ ಕೆನಡಾ ರಾಷ್ಟ್ರದ ಉಪರಾಷ್ಟ್ರಪತಿಗಳ ಹುದ್ದೆ.

The qualifications of members of parliament has been determined under which of these factors?

  1. constitutionally qualifications has been prescribed.
  2. qualifications has been prescribed under representation of people act-1951.
  3. qualifications has been prescribed under anti defection law.
choose the correct code
 

ಸಂಸತ್ ಸದಸ್ಯರ ಅರ್ಹತಾ ಮಾನದಂಡಗಳನ್ನು ಕೆಳಗಿನ ಯಾವ ಅಂಶಗಳ ಆಧಾರದ ಮೇಲೆ ನಿಗದಿಪಡಿಸಲಾಗಿದೆ?

  1. ಸಂವಿಧಾನಾತ್ಮಕವಾಗಿ ಕೆಲ ಅರ್ಹತಾ ಮಾನದಂಡಗಳನ್ನು ಉಲ್ಲೇಖಿಸಲಾಗಿದೆ.
  2. ಪ್ರಜಾಪ್ರತಿನಿಧಿ ಕಾಯ್ದೆ-1951 ಅಡಿಯಲ್ಲಿ ಕೆಲ ಅರ್ಹತಾ ಮಾನದಂಡಗಳನ್ನು ಉಲ್ಲೇಖಿಸಲಾಗಿದೆ.
  3. ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅರ್ಹತಾ ಮಾನದಂಡಗಳನ್ನು ಉಲ್ಲೇಖಿಸಲಾಗಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1 and 2/1 ಮತ್ತು 2
2 and 3/2 ಮತ್ತು 3
3 only/3 ಮಾತ್ರ
1,2 and 3./ 1, 2 ಮತ್ತು 3.

Which of these constitutional positions presides joint session?

  1. speaker of Lok Sabha.
  2. deputy speaker of Lok Sabha in the absence of speaker.
  3. Chairman of Rajya Sabha in the absence of deputy speaker.

choose the correct code

ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಈ ಕೆಳಗಿನ ಯಾವ ಸಂವಿಧಾನಾತ್ಮಕ ಹುದ್ದೆಗಳು ವಹಿಸುತ್ತವೆ.

  1. ಲೋಕಸಭೆಯ ಸ್ಪೀಕರ್.
  2. ಲೋಕಸಭೆಯ ಸ್ಪೀಕರ್ ಗೈರುಹಾಜರಿಯಲ್ಲಿ ಡೆಪ್ಯೂಟಿ ಸ್ಪೀಕರ್.
  3. ಡೆಪ್ಯೂಟಿ ಸ್ಪೀಕರ್ ಗೈರುಹಾಜರಿಯಲ್ಲಿ ರಾಜ್ಯಸಭೆಯ ಅಧ್ಯಕ್ಷರು ಅಧ್ಯಕ್ಷತೆ ವಹಿಸುತ್ತಾರೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1 only/1 ಮಾತ್ರ
2 only/2 ಮಾತ್ರ
1,2 and 3/1, 2 ಮತ್ತು 3
1 and 2./ 1 ಮತ್ತು 2.

Which of these parliamentary committees are presided by the member of opposition party?

ಕೆಳಗಿನ ಯಾವ ಸಂಸದೀಯ ಸಮಿತಿಗಳ ಅಧ್ಯಕ್ಷತೆಯನ್ನು ವಿರೋಧ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರು ವಹಿಸುತ್ತಾರೆ?

Public undertakings committee./ ಸಾರ್ವಜನಿಕ ಉದ್ದಿಮೆಗಳ ಸಮಿತಿ.
Estimates committee./ ಅಂದಾಜು ಸಮಿತಿ
Public accounts committee./ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ.
Human resource development committee./ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ

Which of these factors can be considered as criteria of Human Development Index?

  1. adult education and school enrollment ratio.
  2. life expectancy.
  3. standard of living.
  4. per capita purchasing power parity.

choose the correct code

 

ಕೆಳಗಿನ ಯಾವ ಅಂಶಗಳನ್ನು, ಮಾನವ ಅಭಿವೃದ್ಧಿ ಸೂಚ್ಯಂಕದ ಮಾನದಂಡಗಳು ಎಂದು ಪರಿಗಣಿಸಬಹುದು?

  1. ವಯಸ್ಕ ಶಿಕ್ಷಣ ಮತ್ತು ಶಾಲಾ ನೋಂದಣಿ ಪ್ರಮಾಣ.
  2. ಜೀವಿತಾವಧಿ.
  3. ಜೀವನ ಮಟ್ಟ.
  4. ತಲಾ ಕೊಂಡುಕೊಳ್ಳುವ ಶಕ್ತಿ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1,2,3 and 4/ 1, 2, 3 ಮತ್ತು 4
1 and 4/1 ಮತ್ತು 4
3 and 4 /3 ಮತ್ತು 4
2 and 3./ 2 ಮತ್ತು 3.

Which of these actions will be taken by Reserve Bank of India during inflation?

  1. tight credit and monetary policy to reduce the liquidity in the market.
  2. take appropriate actions to increase the liquidity in the market.
  3. action will be taken with respect to liquidity management.

choose the correct code

 

ಹಣದುಬ್ಬರ ಹೆಚ್ಚಳವಾದ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೆಳಗಿನ ಯಾವ ಕ್ರಮಗಳಿಗೆ ಮುಂದಾಗುತ್ತದೆ?

  1. ಮಾರುಕಟ್ಟೆಯಲ್ಲಿರುವ ದ್ರವ್ಯತೆಯನ್ನು ಕಡಿಮೆ ಮಾಡಲು ಸಾಲ ಮತ್ತು ಹಣಕಾಸು ನೀತಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
  2. ಮಾರುಕಟ್ಟೆಯಲ್ಲಿನ ದ್ರವ್ಯತೆಯನ್ನು ಹೆಚ್ಚಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
  3. ದ್ರವ್ಯತೆಯ ಮೇಲೆ ಪರಿಣಾಮ ಉಂಟಾಗುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1 only/1 ಮಾತ್ರ
1,2 and 3/1, 2 ಮತ್ತು 3
2 and 3/2 ಮತ್ತು 3
D.3 only./ 3 ಮಾತ್ರ.

Marginal standing Facility is related to which of these factors?

  1. credit and monetary policy of RBI.
  2. credit given by World Bank to poor countries.
  3. credit given by International monetary fund to the countries of Africa.
choose the correct code
 

ಅಂಚಿನ ಮಿತಿಯ ಸಾಲದ ಸೌಲಭ್ಯ ಕೆಳಗಿನ ಯಾವ ವಿಚಾರಗಳಿಗೆ ಸಂಬಂಧಪಟ್ಟಿರುತ್ತದೆ?

  1. ಭಾರತೀಯ ರಿಸರ್ವ್ ಬ್ಯಾಂಕಿನ ಸಾಲ ಮತ್ತು ಹಣಕಾಸು ನೀತಿ.
  2. ಶ್ವಬ್ಯಾಂಕಿನ ಬಡರಾಷ್ಟ್ರಗಳಿಗೆ ಸಾಲ ನೀಡುವ ಸೌಲಭ್ಯ.
  3. ಅಂತರರಾಷ್ಟ್ರೀಯ ಹಣಕಾಸು ನಿಧಿ ಆಫ್ರಿಕಾ ಖಂಡದ ರಾಷ್ಟ್ರಗಳಿಗೆ ನೀಡುತ್ತಿರುವ ಸಾಲದ ಸೌಲಭ್ಯ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1, 2 and 3/1, 2 ಮತ್ತು 3
1 only/1 ಮಾತ್ರ
3 only/3 ಮಾತ್ರ
2 and 3/ 2 ಮತ್ತು 3.

Which of these expenditure can be considered as capital expenditure?

  1. loan facility given by Indian government to states and union territories.
  2. loan facility given by Indian government foreign countries and foreign banks.

choose the correct code

ಕೆಳಗಿನ ಯಾವ ವೆಚ್ಚಗಳನ್ನು ಬಂಡವಾಳ ವೆಚ್ಚವೆಂದು ಪರಿಗಣಿಸಬಹುದು?

  1. ಭಾರತ ಸರ್ಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡುವ ಸಾಲದ ಸೌಲಭ್ಯ.
  2. ಭಾರತ ಸರ್ಕಾರ ಅನ್ಯ ರಾಷ್ಟ್ರಗಳಿಗೆ ಮತ್ತು ವಿದೇಶಿ ಬ್ಯಾಂಕುಗಳಿಗೆ ನೀಡುವ ಸಾಲದ ಸೌಲಭ್ಯ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
1 only/1 ಮಾತ್ರ
2 only/2 ಮಾತ್ರ
1 and 2/1 ಮತ್ತು 2
Both the statements are false./ ಮೇಲಿನ ಎರಡು ಹೇಳಿಕೆಗಳು ತಪ್ಪಾಗಿದೆ.

Which of these steps are taken by the government to reduce fiscal deficit?

  1. Introduction of voluntary retirement scheme in India.
  2. Introduction of Targeted Public Distribution system.
  3. Introduction of tax reforms.

choose the correct code

ವಿತ್ತೀಯ ಕೊರತೆಯನ್ನು ನೀಗಿಸಲು ಮತ್ತು ಕಡಿವಾಣ ಹಾಕಲು ಕೆಳಗಿನ ಯಾವ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ?

  1. ಸ್ವಯಂ ಪ್ರೇರಿತ ನಿವೃತ್ತಿ ಘೋಷಣೆ ಯೋಜನೆಯನ್ನು ಜಾರಿಗೆ ತರುವ ಮೂಲಕ.
  2. ಗುರಿ ಆಧಾರಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ.
  3. ತೆರಿಗೆ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1 and 2/1 ಮತ್ತು 2
2 and 3/2 ಮತ್ತು 3
1 and 3/1 ಮತ್ತು 3
1, 2 and 3./ 1, 2 ಮತ್ತು 3

Which of these statements are true with respect to world tuberculosis Day?

  1. world tuberculosis Day is celebrated every year on 24th of March.
  2. The main objective of celebrating world tuberculosis Day is to create awareness about the negative effects of Tuberculosis.
  3. the theme of present year was" invest to end TB save lives".

choose the correct code

ವಿಶ್ವ ಕ್ಷಯರೋಗ ದಿನಾಚರಣೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

  1. ವಿಶ್ವ ಕ್ಷಯರೋಗ ದಿನಾಚರಣೆಯನ್ನು ಪ್ರತಿವರ್ಷ ಮಾರ್ಚ್ 24 ರಂದು ಆಚರಿಸಲಾಗುತ್ತದೆ.
  2. ವಿಶ್ವ ಕ್ಷಯರೋಗ ದಿನಾಚರಣೆಯ ಉದ್ದೇಶವೇನೆಂದರೆ ಕ್ಷಯರೋಗದ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸುವುದು.
  3. ಪ್ರಸ್ತುತ ವರ್ಷದ ಧ್ಯೇಯವಾಕ್ಯ "Invest to end TB. Save lives" ಎನ್ನುವುದಾಗಿತ್ತು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1,2 and 3/1, 2 ಮತ್ತು 3
1 and 3 /1 ಮತ್ತು 3
3 only/3 ಮಾತ್ರ
2 only./ 2 ಮಾತ್ರ.

Which of these schemes has been initiated by the government with an objective of financial inclusion?

  1. Pradhanmantri Jan Dhan Yojana.
  2. Atal pension scheme.
  3. Pradhanmantri Vayo Vandana scheme.
  4. swachh Bharat Abhiyan .

choose the correct code

ಕೆಳಗಿನ ಯಾವ ಯೋಜನೆಗಳನ್ನು ಕೇಂದ್ರ ಸರ್ಕಾರ ವಿತ್ತೀಯ ಸೇರ್ಪಡೆಯ ಧ್ಯೇಯದಿಂದ ಹಮ್ಮಿಕೊಂಡಿದೆ?

  1. ಪ್ರಧಾನಮಂತ್ರಿ ಜನ್ ಧನ್ ಯೋಜನೆ.
  2. ಅಟಲ್ ಪಿಂಚಣಿ ಯೋಜನೆ.
  3. ಪ್ರಧಾನಮಂತ್ರಿ ವಯೋ ವಂದನ ಯೋಜನೆ.
  4. ಸ್ವಚ್ಛ ಭಾರತ ಅಭಿಯಾನ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1, 2, 3 and 4/1, 2, 3 ಮತ್ತು 4
1, 2 and 3/1, 2 ಮತ್ತು 3
1 and 3./ 1 ಮತ್ತು 3
2 and 4./ 2 ಮತ್ತು 4.

Which of these organisations jointly organised WINGS INDIA-2022 program?

  1. Union Civil Aviation ministry.
  2. Airport Authority of India.
  3. Federation of Indian Chambers of Commerce and industry.
  4. Union small scale industry ministry.

choose the correct code

 

ವಿಂಗ್ಸ್ ಇಂಡಿಯಾ-2022 ಕಾರ್ಯಕ್ರಮವನ್ನು ಕೆಳಗಿನ ಯಾವ ಸಂಸ್ಥೆಗಳು ಆಯೋಜಿಸಿವೆ?

  1. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ.
  2. ಭಾರತೀಯ ವಿಮಾನ ಪ್ರಾಧಿಕಾರ.
  3. ಭಾರತೀಯ ವಾಣಿಜ್ಯೋದ್ಯಮಿ ಮತ್ತು ಕೈಗಾರಿಕ ಒಕ್ಕೂಟ.
  4. ಕೇಂದ್ರ ಸಣ್ಣ ಕೈಗಾರಿಕೆ ಸಚಿವಾಲಯ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

1 only/1 ಮಾತ್ರ
2 only/2 ಮಾತ್ರ
1,2 and 3/1, 2 ಮತ್ತು 3
3 and 4./ 3 ಮತ್ತು 4
{"name":"Exam Mastermind - PSI Mock Test (Paper 2) ಎಕ್ಸಾಮ್ ಮಾಸ್ಟರ್ ಮೈಂಡ್ ಅಣಕು ಪರೀಕ್ಷೆ - ಪಿಎಸ್ಐ (ಪತ್ರಿಕೆ 2)", "url":"https://www.quiz-maker.com/QPREVIEW","txt":"Kindly let us know your Name (To be included in your participation certificate)   ನಿಮ್ಮ ಹೆಸರನ್ನು ನಮಗೆ ತಿಳಿಸಿ (ನಿಮ್ಮ ಭಾಗವಹಿಸುವಿಕೆ ಪ್ರಮಾಣಪತ್ರದಲ್ಲಿ ಸೇರಿಸಲು), Kindly let us know your phone number   ನಿಮ್ಮ ಫೋನ್ ಸಂಖ್ಯೆಯನ್ನು ದಯವಿಟ್ಟು ನಮಗೆ ತಿಳಿಸಿ, Please enter your email address","img":"https://www.quiz-maker.com/3012/images/ogquiz.png"}
Powered by: Quiz Maker